

ಹೊನ್ನಾವರ: ಸೂರಜ್ ನಾಯ್ಕ ಸೋನಿ ಗೆಳೆಯರ ಬಳಗ ಕುಮಟಾ-ಹೊನ್ನಾವರ ಹಾಗೂ ಕರ್ನಾಟಕ ಕ್ರಾಂತಿರಂಗ ಸಾಲ್ಕೋಡ ಘಟಕದ ಆಶ್ರಯದಲ್ಲಿ ತಾಲೂಕಿನ ಅರೇಅಂಗಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆ. 27 ರಂದು ಬೆಳಗ್ಗೆ 9.30ರಿಂದ ಉಚಿತ ಆರೋಗ್ಯ ಶಿಬಿರ ನಡೆಯಲಿದೆ ಎಂದು ಕರ್ನಾಟಕ ಕ್ರಾಂತಿರಂಗ ಜಿಲ್ಲಾ ಯುವ ಅಧ್ಯಕ್ಷ ಸಚಿನ್ ನಾಯ್ಕ ತಿಳಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಟಿಕಾನ ಮಂಗಳೂರು ಇವರ ನೇತೃತ್ವದ ಆರೋಗ್ಯ ತಪಾಸಣೆ ನಡೆಯಲಿದೆ. ಬೆಳಗ್ಗೆ 9:30 ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ. ಇಸಿಜಿ, ಬಿಪಿ ಮತ್ತು ಶುಗರ್ ಪರೀಕ್ಷೆ ನಡೆಯಲಿದೆ. ತಾಲೂಕಿನ ಜನತೆ ಶಿಬಿರದ ಪ್ರಯೋಜನ ಪಡೆಯಬೇಕು ಎಂದರು. ಪಪಂ ಸದಸ್ಯ ಶ್ರೀಪಾದ ನಾಯ್ಕ ರಾಯಲಕೇರಿ, ಸಂಘಟಕರಾದ ಲಕ್ಷ್ಮಿಕಾಂತ ಹೆಗಡೆ, ನಾಗರಾಜ ನಾಯ್ಕ ಶಿರೂರು, ಲಕ್ಷ್ಮಣ ನಾಯ್ಕ, ಗಜಾನನ ನಾಯ್ಕ, ಧನಂಜಯ ನಾಯ್ಕ ಹೊನ್ನಾವರ, ಗೋಪಾಲ ನಾಯ್ಕ ಅಠಾರ, ಸತೀಶ ನಾಯ್ಕ ಅಠಾರ, ಮಯೂರ ನಾಯ್ಕ ದರ್ಬೆಜಡ್ಡಿ, ರಾಜೇಶ ನಾಯ್ಕ, ಶರತ್ ಮೇಸ್ತಾ, ಡಿ.ಎಂ. ನಾಯ್ಕ ಇತರರಿದ್ದರು.