

ಹುಬ್ಬಳ್ಳಿ: ಹುಣ್ಣಿಮೆ ನಿಮಿತ್ತ ಇಲ್ಲಿನ ನೃಪತುಂಗ ಬೆಟ್ಟದ ಬಳಿಯ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಉಚಿತ ಸಾಮೂಹಿಕ ಧ್ಯಾನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆ. 30ರಂದು ಏರ್ಪಡಿಸಲಾಗಿದೆ.
ಸಂಜೆ 4 ಗಂಟೆಗೆ ಸೀನಿಯರ್ ಪಿರಾಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ ಅವರು ಸಾಮೂಹಿಕ ಧ್ಯಾನ ಶಿಬಿರ ನಡೆಸಿಕೊಡುವರು. ಸಂಜೆ 5.30ಕ್ಕೆ ಡಾ. ರಾಜೇಶ್ವರಿ ಪಟ್ಟಣಶೆಟ್ಟಿ ಅವರು ‘ಧ್ಯಾನದಿಂದ ಆಗುವ ವೈಜ್ಞಾನಿಕ ಲಾಭಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಹುಬ್ಬಳ್ಳಿ ಪಿರಾಮಿಡ್ ಧ್ಯಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.