ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

Free Glasses Distribution Program
ರಕ್ಕಸಗಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.
Published on

ನಾಲತವಾಡ: ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ರಕ್ಕಸಗಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ನವೆಂಬರ್ ತಿಂಗಳಿನಲ್ಲಿ ಕಣ್ಣಿನ ತಪಾಸಣೆ ನಡೆಸಲಾಗಿದ್ದು, ದೃಷ್ಟಿ ದೋಷವಿದ್ದ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯಿಂದ ಟೈಟಾನ್ ಕಂಪನಿಯ ಗುಣಮಟ್ಟದ ಕನ್ನಡಕ ವಿತರಿಸಲಾಯಿತು.

ಕಾನಿಕೇರಿ ಬಿಜ್ಜೂರ, ಗಾಳಪೂಜಿ, ಲೊಟಗೇರಿ, ಟಕ್ಕಳಕಿ ಇಂಗಳಗಿ, ಬಂಗಾರಗುಂಡ- ಕಪನೂರ, ಹುನಕುಂಟಿ ಸರ್ಕಾರಿ ಶಾಲೆಗಳಿಗೆ ಆಸ್ಪತ್ರೆ ಸಿಬ್ಬಂದಿ ಭೇಟಿ ನೀಡಿ ಕೆಲ ಮಕ್ಕಳಿಗೆ ಸ್ಥಳದಲ್ಲಿಯೇ ಔಷಧೋಪಚಾರ ಮಾಡಲಾಯಿತು. ಗಂಭೀರ ಸಮಸ್ಯೆಗಳಿದ್ದ ಮಕ್ಕಳಿಗೆ ತಪಾಸಣೆ ವೇಳೆ ವಿತರಿಸಿದ ಆಸ್ಪತ್ರೆಯ ಗುರುತಿನ ಚೀಟಿ ತೆಗೆದುಕೊಂಡು ಪಾಲಕರೊಂದಿಗೆ ಬೆಂಗಳೂರಿಗೆ ಬಂದರೆ ಉಚಿತ ಶಸ್ತ್ರಚಿಕಿತ್ಸೆ ನೀಡುವುದಾಗಿ ತಿಳಿಸಿದರು. ನಂತರ ಮಕ್ಕಳಿಗೆ ಕಣ್ಣಿನ ಆರೊಗ್ಯ ರಕ್ಷಣೆ ಕುರಿತು ಸಲಹೆ ನೀಡಲಾಯಿತು.

ಮುಖ್ಯಶಿಕ್ಷಕ ಅಶೋಕ ನರಸಲಗಿ, ಗಂಗಣ್ಣ ಕಮರಿ, ಎಸ್.ಎಸ್. ನಾಗರಬೆಟ್ಟ, ರೇಣುಕಾ ಹಿರೇಮಠ, ಎ.ಎಸ್. ಶಿರಗುಂಪಿ, ಎಸ್.ಎಚ್.ವಾಲೀಕಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net