ವೈರಾಗ್ಯದಿಂದ ಮುಕ್ತರಾಗಿ

27Ckd1
Published on

ಚಿಕ್ಕೋಡಿ: ಸಮಾನತೆ, ಕಾಯಕ, ದಾಸೋಹ ಸಾರಿದ ಬಸವಣ್ಣವರ ತತ್ತ್ವಗಳನ್ನು ಮಠಮಾನ್ಯಗಳು ಇಂದಿಗೂ ಜೀವಂತವಾಗಿಟ್ಟುಕೊಂಡು ಬಂದಿವೆ ಎಂದು ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.

ತಾಲೂಕಿನ ಡೋಣವಾಡ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ವಚನ ಪ್ರವಚನ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಭಕ್ತಿ, ಜ್ಞಾನ, ವೈರಾಗ್ಯದಿಂದ ಮುಕ್ತರಾಗಲು ಸಾಧ್ಯ ಎಂದರು.

ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಆರ್.ಕೆ.ಬಾಗಿ ಮಾತನಾಡಿ, ಭಾರತ ಸಂಸ್ಕೃತಿಯ ನಾಡು, ಇಂತಹ ನಾಡಿನಲ್ಲಿ ಇಂದಿನ ಮಠಮಾನ್ಯಗಳು, ಜಗದ್ಗುರುಗಳು ಬಿತ್ತಿದ ಬೀಜಗಳಿಂದ ದೇಶ ಸುಸಂಸ್ಕೃತವಾಗಿದೆ ಎಂದು ಹೇಳಿದರು.

ವಕೀಲ ನಾಗೇಶ ಕಿವಡ ಮಾತನಾಡಿದರು. ಕಲ್ಮೇಶ್ವರ ಕಮಿಟಿ ಸದಸ್ಯರಾದ ಶಿವಲಿಂಗ ಯಾದಗೂಡೆ, ಮುತ್ತೆಪ್ಪ ಹಳಬರ, ಕಲ್ಲಪ್ಪ ಸೊಲ್ಲಾಪೂರೆ, ಅರ್ಜುನ ಬಂಗಿ, ಕಲ್ಲಪ್ಪ ಕಿವಡ, ರೇವಯ್ಯ ಜಂಗಮ, ರಾಚಪ್ಪ ಮಗದುಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net