

ಮಡಿಕೇರಿ: ಮಡಿಕೇರಿ ನಗರದ ಸರಕಾರಿ ಪದವಿಪೂರ್ವ ಕಾಲೇಜ್‌ನ ಸೇವಾದಳದ ಸದಸ್ಯರಿಗೆ ಮಡಿಕೇರಿ ರೋಟರಿ ವತಿಯಿಂದ ಉಚಿತವಾಗಿ ಸಾಕ್ಸ್ ಮತ್ತು ಕ್ಯಾನ್ವಾಸ್ ಪಾದರಕ್ಷೆಗಳನ್ನು ನೀಡಲಾಯಿತು.
ಸೇವಾದಳದ ಸಮವಸ್ತ್ರದ ಭಾಗವಾದ ಬಿಳಿ ಸಾಕ್ಸ್ ಮತ್ತು ಪಾದರಕ್ಷೆಗಳೊಂದಿಗೆ ಸ್ವಾತಂತ್ರ್ಯೋತ್ಸವದ ಕವಾಯತುವಿನಲ್ಲಿ ಭಾಗವಹಿದ ಸೇವಾದಳ ತಂಡ ದ್ವಿತೀಯ ಬಹುಮಾನ ಪಡೆದಿರುವುದಾಗಿ ಕಾಲೇಜ್‌ನ ಪ್ರಾಂಶುಪಾಲೆ ಶಶಿಕಲಾ ತಿಳಿಸಿದರು.
ರೋಟರಿ ಅಧ್ಯಕ್ಷೆ ರೋ.ಲಲಿತಾ ರಾಘವನ್, ಕಾರ್ಯದರ್ಶಿ ರೋ.ಎಂ.ಬಿ.ಸೋಮಣ್ಣ ರೋ.ಅನಂತ ಸುಬ್ಬರಾವ್ ಹಾಗೂ ರೋ.ಸುದಯ್ ನಾಣಯ್ಯ ಅವರು ಪಾದರಕ್ಷೆಯ ಪ್ರಾಯೋಜಕರಾಗಿದ್ದಾರೆ.