ರಾಜ್ಯೋತ್ಸವಕ್ಕೆ ಉಚಿತ ತಿಂಡಿ ತಿನಿಸು: ಹೋಟೆಲ್ ಮಾಲೀಕರ ಕನ್ನಡಾಭಿಮಾನ

hotel
Published on

ಮೂಡುಬಿದಿರೆ: ಮಿಜಾರು ಶ್ರೀಗೋಪಾಲಕೃಷ್ಣ ದೇವಸ್ಥಾನ ಬಳಿ ಇರುವ ಶ್ರೀಕೃಷ್ಣ ಹೊಟೇಲ್ ಮಾಲೀಕ ರಘುವೀರ್ ಕನ್ನಡ ರಾಜ್ಯೋತ್ಸವ ದಿನ ಗ್ರಾಹಕರಿಗೆ ಉಚಿತವಾಗಿ ತಿಂಡಿ ತಿನಿಸು ವಿತರಿಸಿ ಕನ್ನಡಾಭಿಮಾನ ಮೆರೆದಿದ್ದಾರೆ.

ಪರಿಸರದಲ್ಲಿ ಅಮ್ಮಿಯಣ್ಣ ಎಂದೇ ಜನಪ್ರಿಯರಾಗಿರುವ ರಘುವೀರ್ ಹಲವು ವರ್ಷಗಳಿಂದ ರಾಜೋತ್ಸವ ದಿನದಂದು ಗ್ರಾಹಕರಿಗೆ ತಿಂಡಿ ತಿನಿಸುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ರಘುವೀರ್ ಕನ್ನಡಾಭಿಮಾನಕ್ಕೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಡಾ.ಭರತ್ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net