ಉಚಿತ ಮೇವಿನ ಬಿತ್ತನೆ ಬೀಜ ವಿತರಣೆ

24-kkr-1(11-23
ಕಿಕ್ಕೇರಿ ಪಶು ಆಸ್ಪತ್ರೆಯಲ್ಲಿ ಉಚಿತವಾಗಿ ಮೇವಿನ ಬಿತ್ತನೆ ಜೋಳದ ಬೀಜವನ್ನು ಗುರುವಾರ ವಿತರಿಸಲಾಯಿತು. ಪಶು ವೈದ್ಯಾಧಿಕಾರಿ ಬಿ.ಎನ್. ವಿನಯಕುಮಾರ್, ಚೇತನ್, ಪ್ರಕಾಶ್ ಹಾಜರಿದ್ದರು.
Published on

ಕಿಕ್ಕೇರಿ : ರೈತರು ರಾಸುಗಳಿಗೆ ಪೌಷ್ಟಿಕಾಂಶಭರಿತ ಮೇವಿನ ಅವಶ್ಯಕತೆ ಇದ್ದು, ಜಾನುವಾರುಗಳ ಮೇವಿಗಾಗಿ ಜೋಳ ಬೆಳೆಯಲು ರೈತರು ಮುಂದಾಗಲಿ ಎಂದು ಪಶು ವೈದ್ಯಾಧಿಕಾರಿ ಬಿ.ಎನ್. ವಿನಯಕುಮಾರ್ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಅರ್ಹ ರೈತರಿಗೆ ಉಚಿತವಾಗಿ ಮೇವಿನ ಬಿತ್ತನೆ ಜೋಳವನ್ನು ಗುರುವಾರ ವಿತರಿಸಿ ಮಾತನಾಡಿದ ಅವರು, ಈ ಬಾರಿ ಮಳೆಗಾಲವಿಲ್ಲದ ಕಾರಣ ಹೈನುಗಾರಿಕೆಗೆ ದೊಡ್ಡ ಹೊಡೆತ ಬೀಳಲಿದೆ. ರೈತರು ಜೋಳ, ಜೋಳದ ಕಡ್ಡಿಯನ್ನು ಸಂಗ್ರಹಣೆ ಮಾಡಿಕೊಳ್ಳಲು ಮುಂದಾಗಿ. ಜೋಳ ರಾಸುಗಳಿಗೆ ಉತ್ತಮ ಪೌಷ್ಟಿಕಾಂಶವನ್ನು ತುಂಬಲಿದೆ ಎಂದರು.
ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಜಾನುವಾರು ಪಾಲಕ ರೈತರಿಗೆ 5 ಕೆ.ಜಿ. ಬಿತ್ತನೆ ಬೀಜದ ವಿತರಿಸಲಾಗುತ್ತಿದೆ. ಅರ್ಹತೆ ಆಧಾರದ ಮೇಲೆ ರೈತರಿಗೆ ನೀಡಲಾಗುತ್ತಿದೆ. ಈ ಮೇವು ಜಾನುವಾರುಗಳಿಗೆ ಪೌಷ್ಟಿಕಾಂಶ ನೀಡುವುದರ ಜತೆಗೆ ಹೆಚ್ಚಿನ ಹಾಲಿನ ಇಳುವರಿ ನೀಡಲು ಸಹಾಯವಾಗಲಿದೆ ಎಂದರು.
ಹೋಬಳಿಯ ವಿವಿಧ ಗ್ರಾಮದ ರೈತರು ಪಹಣಿ ದಾಖಲೆ ನೀಡಿ ಮೇವಿನ ಬಿತ್ತನೆ ಬೀಜ ಪಡೆದರು. ಸಿಬ್ಬಂದಿ ಚೇತನ್, ಪ್ರಕಾಶ್, ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net