

ಮಂಡ್ಯ: ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಬರಪರಿಸ್ಥಿತಿ ಹಿನ್ನಲೆಯಲ್ಲಿ ಜಾನುವಾರುಗಳಿಗೆ ಮೇವು (ಹುಲ್ಲು) ಒದಗಿಸಲು ಮುಂಜಾಗ್ರತಾ ಕ್ರಮವಾಗಿ ಪಿಂಜಾರಾಪೋಲ್ ಮತ್ತು ಖಾಸಗಿ ಗೋಶಾಲೆಗಳಿಗೆ ಸಹಾಯಧನ ಯೋಜನೆಯಲ್ಲಿ ಖರೀದಿಸಿದ ಮೇವಲ್ಲಿ ಉಳಿದಿರುವ 42.5 ಟನ್ ಒಣಹುಲ್ಲನ್ನು ಒಂದು ವರ್ಷ ಮದ್ದೂರು ತಾಲೂಕು ಹೊತಗೆರೆ ಗೋಶಾಲೆಯಲ್ಲಿ ಶೇಖರಿಸಿಡಲಾಗಿತ್ತು. ಒಣಹುಲ್ಲು ಹಳೇಯದಾಗಿರುವುದರಿಂದ ಅವಶ್ಯಕತೆ ಇರುವ ರೈತರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.
ಅವಶ್ಯಕತೆ ಇರುವ ರೈತರು ಮತ್ತು ಸಂಘ ಸಂಸ್ಥೆಗಳು ಸೆ.15ರೊಳಗಾಗಿ ಮದ್ದೂರು ಪಶು ಆಸ್ಪತ್ರೆ ಕಚೇರಿಗೆ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಗೋಶಾಲೆಯಲ್ಲಿ ಈಗ ಹೇಗಿದೇಯೋ ಹಾಗೇಯೇ ಒಣಹುಲ್ಲನ್ನು ಸ್ವಂತ ವೆಚ್ಚದಲ್ಲಿ ಸಾಗಾಣಿಕೆ ಮಾಡಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.