

ವಿಜಯವಾಣಿ ಸುದ್ದಿಜಾಲ ಬೈಂದೂರು
ಜ್ಞಾನವಿಕಾಸ ಯೋಜನೆಯಡಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳಾ ಸಬಲೀಕರಣಕ್ಕೆ ಅನುಗುಣವಾಗಿ ಮಹಿಳೆಯರ ಕುಟುಂಬ ಅಭಿವೃದ್ಧಿ ಹಾಗೂ ಸ್ವಉದ್ಯೋಗಕ್ಕೆ ಪೂರಕವಾಗಿ ಕಾರ್ಯಕ್ರಮ ನಡೆಸುತ್ತಿದ್ದು, ಗ್ರಾಮದ ಜನರಿಗಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಧಗ್ರಾಯೋ ಬೈಂದೂರು ತಾಲೂಕು ಯೋಜನಾಧಿಕಾರಿ ಕೆ. ವಿನಾಯಕ ಪೈ ಹೇಳಿದರು.
ಕೊಲ್ಲೂರು ವಲಯದ ಜಡ್ಕಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ ಸಹಯೋಗದಲ್ಲಿ ನೇತ್ರ ಉಚಿತ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟದ ಮತ್ತು ವಲಯ ಅಧ್ಯಕ್ಷ ರವೀಂದ್ರ ಶೆಟ್ಟಿ, ವಲಯದ ಜನಜಾಗೃತಿ ಅಧ್ಯಕ್ಷ ಮಹಾಬಲ ಪೂಜಾರಿ, ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ದೇವದಾಸ, ನಾಗರತ್ನ ಶೆಟ್ಟಿ, ರೋಸಮ್ಮ, ಗ್ರಾಪಂ ಅಧ್ಯಕ್ಷೆ ಪಾರ್ವತಿ, ವಿಜಯವಾಣಿ ಪತ್ರಿಕೆ ವಿತರಕ ಚಂದ್ರ ಪೂಜಾರಿ ಸಳ್ಕೊಡು, ಕೃಷಿ ಅಧಿಕಾರಿ ರಾಜು, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುರೇಖಾ ಪೂಜಾರಿ, ಸೇವಾ ಪ್ರತಿನಿಧಿ ಜ್ಯೋತಿ, ತಾರಾ ಉಪಸ್ಥಿತರಿದ್ದರು. ರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.