ನೇತ್ರ ಉಚಿತ ತಪಾಸಣೆ, ಲೆನ್ಸ್ ಅಳವಡಿಕೆ ನಾಳೆ

Free eye checkup, lens fitting tomorrow
Published on

ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಲೀಲಾಬಾಯಿ ಓಸ್ವಾಲ್ ಮೆಮೋರಿಯಲ್ ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೆ. 15ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನೇತ್ರ ಉಚಿತ ತಪಾಸಣೆ, ಶಸಚಿಕಿತ್ಸೆ ಮತ್ತು ಲೆನ್ಸ್ ಅಳವಡಿಕೆ ಶಿಬಿರ ಏರ್ಪಡಿಸಲಾಗಿದೆ.

ಶಹಾ ಛಗನಲಾಲ್ ವೀರಚಂದ ಓಸ್ವಾಲ್‌ಜಿ ಸ್ಮರಣಾರ್ಥ ಲಯನ್ಸ್ ಕ್ಲಬ್, ದಿ. ನೇಚರ್ ಗ್ರೋ ಮೋರ್ ೌಂಡೇಷನ್, ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯ ನೇತ್ರ ವಿಭಾಗದ ಆಶ್ರಯದಲ್ಲಿ ಶಿಬಿರ ನಡೆಯಲಿದೆ.

ಬಿಎಲ್‌ಡಿಇ ಆಸ್ಪತ್ರೆಯ ನೇತ್ರ ತಜ್ಞೆ ಡಾ. ರೇಖಾ ಮುಧೋಳ, ಡಾ. ರಾಘವೇಂದ್ರ ಇಜೇರಿ, ಡಾ. ವಲ್ಲಭ್ ಕೆ., ಡಾ. ಕೀರ್ತಿ ವಾಲಿ, ಡಾ. ಸುನೀಲ ಬಿರಾದಾರ, ಡಾ. ಸುಮನ್ ದೇವರಮನಿ ತಪಾಸಣೆ ನಡೆಸುವರು.

ಅಗತ್ಯವಿದ್ದವರನ್ನು ಬಿಎಲ್‌ಡಿಇಗೆ ಕರೆದೊಯ್ದು ಶಸಚಿಕಿತ್ಸೆ, ಲೆನ್ಸ್ ಅಳವಡಿಕೆ ಮಾಡಲಾಗುವುದು. ಶಸ ಚಿಕಿತ್ಸೆಗೆ ಒಳಪಡುವವರು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಜತೆ ಒಬ್ಬ ಸಹಾಯಕರನ್ನು ಕರೆತರಬೇಕು.

ಹೆಸರು ನೋಂದಾಯಿಸಲು ಸಂಜೀವಕುಮಾರ ಓಸ್ವಾಲ್ (ಮೊ. 9449142735), ರಾವಸಾಹೇಬ ದೇಸಾಯಿ (9448301670), ಶರಣಯ್ಯ ಹಿರೇಮಠ (9481081570) ಅವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net