

ಮೈಸೂರು: ಚಾಮುಂಡಿಬೆಟ್ಟ ಪಾದದ ಬಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನ ಆವರಣದಲ್ಲಿ ಇತ್ತೀಚೆಗೆ ಲಯನ್ಸ್ ಕ್ಲಬ್ ಆಫ್ ಮೈಸೂರು, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಹಾಗೂ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸಾರ್ವಜನಿಕರಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
200ಕ್ಕೂ ಹೆಚ್ಚು ಸಾರ್ವಜನಿಕರು ತಪಾಸಣೆಗೆ ಒಳಪಟ್ಟರು. ಕ್ಲಬ್ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಮುಖೇಶ್, ಮುಖಂಡರಾದ ಜೆ.ಲೋಕೇಶ್, ವಿರುಪಾಕ್ಷ, ಬಿ.ಶಿವಣ್ಣ, ಪಿ.ರಮೇಶ್, ಪ್ರತಿಮಾ ರಮೇಶ್, ಕೃಷ್ಣೇಗೌಡ, ಸುಬ್ರಹ್ಮಣ್ಯ, ರಾಜಶೇಖರ್, ದಯಾನಂದ್, ಅಯ್ಯಪ್ಪ ಸ್ವಾಮಿ ಸಮಿತಿ ಅಧ್ಯಕ್ಷ ಶಶಿಧರ್ ಇದ್ದರು.