

ವಿಜಯಪುರ : ಬಬಲೇಶ್ವರ ತಾಲೂಕಿನ ಕಣಬೂರಿನ ಸುಪ್ರಸಿದ್ಧ ಶ್ರೀ ರಾಚೋಟೇಶ್ವರ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನೇತ್ರ ಹಾಗೂ ಮಧುಮೇಹ ರೋಗ ಉಚಿತ ತಪಾಸಣೆ ಶಿಬಿರ ನಡೆಯಿತು.
ಶ್ರೀ ರಾಚೋಟೇಶ್ವರ ಗ್ರಾಮೀಣಾಭಿವೃದ್ಧಿ ಜನಸೇವಾ ಸಂ ಹಾಗೂ ಜನಮಿತ್ರ ಸೋಷಿಯಲ್ ಅಸೋಸಿಯೇಷನ್ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು. ನಗರದ ಕಣಬೂರ ಕಣ್ಣಿನ ಆಸ್ಪತ್ರೆ ಹಾಗೂ ಕಣಬೂರ ಮಧುಮೇಹ ಮತ್ತು ಹೆಲ್ತ್ ಕೇರ್ ಸೆಂಟರ್ ವತಿಯಿಂದ ತಪಾಸಣೆ ನಡೆಸಲಾಯಿತು.
ಕಣಬೂರ ಆಸ್ಪತ್ರೆ ನೇತ್ರ ತ ಡಾ. ಆನಂದ ಕಣಬೂರ ಹಾಗೂ ಮಧುಮೇಹ ತ ಡಾ. ವಿಜಯೀಂದ್ರ ಕಣಬೂರ ಶಿಬಿರದಲ್ಲಿ ಭಾಗವಹಿಸಿದ್ದರು. 200 ಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.
ಜನಸೇವಾ ಸಂದ ರಾಜೇಂದ್ರ ಪಾಟೀಲ, ರಂಗಪ್ಪ ಬಾಚಕ್, ಶ್ರೀಧರ ಮಂಟೂರ ಮತ್ತಿತರರಿದ್ದರು.