ಹರಿಹರದಲ್ಲಿ ನೇತ್ರ ಉಚಿತ ತಪಾಸಣೆ ಶಿಬಿರ

New Project (2)
Published on

ಸುಬ್ರಹ್ಮಣ್ಯ: ರೋಟರಿ ಕ್ಲಬ್ ಸುಬ್ರಹ್ಮಣ್ಯ ವತಿಯಿಂದ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ಸೋಮವಾರ ಆಯೋಜನೆಗೊಂಡಿತು.

ಶ್ರೀ ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಶಿಬಿರ ಉದ್ಘಾಟಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್.ಅಧ್ಯಕ್ಷತೆ ವಹಿಸಿದ್ದರು. ನೇತ್ರ ಪರಿವೀಕ್ಷಕ ಎಸ್.ಶಾಂತರಾಜ್, ಪ್ರಮುಖರಾದ ಡಾ.ವಿಕಾಸ್ ಎಸ್.ಎಂ, ಡಾ.ಅಶ್ವಿನ್ ಸಾಗರ್, ವಿಜಯ ಕುಮಾರ್, ಮನೀಶ್ ಪಲ್ಲತ್ತಡ್ಕ, ರಾಮಕೃಷ್ಣ ಮಲ್ಲಾರ, ಗೋಪಾಲ್ ಎಣ್ಣೆಮಜಲು, ಭವಾನಿಶಂಕರ ಪೈಲಾಜೆ ಉಪಸ್ಥಿತರಿದ್ದರು. ಸಚಿನ್ ಕ್ರೀಡಾ ಸಂಘ, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯಿತಿ, ಶ್ರೀ ಹರಿಹರೇಶ್ವರ ದೇವಸ್ಥಾನ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಸಹಯೋಗ ವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net