

ಕಲ್ಕುಂದ: ನಂಜನಗೂಡು ತಾಲೂಕು ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮೈಸೂರಿನ ವಾಸನ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಯಶಸ್ವಿನಿ ಅರೋಗ್ಯ ಯೋಜನೆಯಡಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಬಿಳಿಗೆರೆ ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ಸುಮಾರು 120 ಜನರು ಯೋಜನೆಯ ಶಿಬಿರ ಸದುಪಯೋಗ ಪಡೆದುಕೊಂಡರು. ಈ ಶಿಬಿರದಲ್ಲಿ ಯಶಸ್ವಿನಿ ಕಾರ್ಡ್ ಹೊಂದಿದ 35 ಜನರಿಗೆ ಕಣ್ಣಿನ ಪೊರೆ ಉಚಿತ ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಯಿತು. ಇತರರಿಗೆ ತಪಾಸಣೆ ನಡೆಸಿ ಸಲಹೆ ನೀಡಲಾಯಿತು. ವೈದ್ಯೆ ಡಾ.ಶ್ರಾವ್ಯಾ, ಪಿಎಸಿಸಿ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಲ್.ಮಹಾದೇವವಸ್ವಾಮಿ, ಕಣ್ಣು ಪರೀಕ್ಷಕ ಪ್ರವೀಣ್ ಕುಮಾರ್, ಸಂಯೋಜಕ ಮಹೇಶ್, ಮುಜಾಹಿದ್ದಿನ್ ಇದ್ದರು.