ಕಣ್ಣಿನ ಉಚಿತ ತಪಾಸಣಾ ಶಿಬಿರ

Published on

ಗುಂಡ್ಲುಪೇಟೆ: ಪಟ್ಟಣದ ಹಿಮಗಿರಿ ಶ್ರೀಗಂಧ ಟ್ರಸ್ಟ್‌ನಲ್ಲಿ ತೆರಕಣಾಂಬಿಯ ಪರಮದೇವ್ ಸ್ಟೋನ್ ಕ್ರಷರ್ ಅವರ ಸಹಯೋಗದಲ್ಲಿ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯ ತಜ್ಞ ವೈದ್ಯರಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಣ್ಣಿನ ಸಮಸ್ಯೆಗಳಾದ ಪೊರೆ, ಗ್ಲಾಕೋಮಾ, ನೀರು ಸೋರುವಿಕೆ, ಗೀಜು ಬರುವುದು, ಹತ್ತಿರ ಮತ್ತು ದೂರದೃಷ್ಟಿ ದೋಷ, ವಾರೆಕಣ್ಣು, ರಾತ್ರಿ ಕುರುಡುತನ ಇವುಗಳ ಬಗ್ಗೆ ತಪಾಸಣೆ ನಡೆಸಲಾಗುವುದು. ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಕೊಯಮತ್ತೂರಿಗೆ ಕರೆದೊಯ್ದು ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಆದ್ದರಿಂದ ಕಣ್ಣಿನ ತೊಂದರೆಯಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಮೊ: 9481820814, 8971872924 ಸಂಪರ್ಕಿಸುವಂತೆ ಎಂದು ಅನುಗ್ರಹ ಫೌಂಡೇಷನ್‌ನ ಕೆ.ರಮೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net