

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ದೇಹದ ಎಲ್ಲ ಭಾಗಗಳು ಅಮೂಲ್ಯ. ಅದರಲ್ಲೂ ಕಣ್ಣು ಎನ್ನುವುದು ದೇವರು ಕೊಟ್ಟ ದೇಹದ ಅತ್ಯಮೂಲ್ಯ ಭಾಗ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮಂಗಳೂರು ವಲಯ ಮುಖ್ಯಸ್ಥ ನವೀನ್ ಕುಮಾರ್ ಎಂ.ಜಿ. ಅಭಿಪ್ರಾಯಪಟ್ಟರು.
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮಂಗಳೂರು ರಿಟೈಲ್ ವಲಯ ಕಚೇರಿ ಆಶ್ರಯದಲ್ಲಿ ಕೊಣಾಜೆಕಾರ್ಸ್ ಫ್ಯೂಯಲ್ ಸಹಕಾರದಲ್ಲಿ, ಪ್ರಸಾದ್ ನೇತ್ರಾಲಯದ ವತಿಯಿಂದ ಬುಧವಾರ ಪಂಜಿಮೊಗರು ಕೊಣಾಜೆಕಾರ್ಸ್ ಫ್ಯೂಯಲ್ ಆವರಣದಲ್ಲಿ ಬುಧವಾರ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಕೊಣಾಜೆಕಾರ್ಸ್ ಡೀಲರ್ ಕೆಕೆ ನಾಸೀರ್ ನಡುಪದವು ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ನೇತ್ರಾಲಯದ ಡಾ.ಮೇಘನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಸಯ್ಯದ್, ಮಾರಾಟ ವಿಭಾಗದ ಹಿರಿಯ ವ್ಯವಸ್ಥಾಪಕ ಪ್ರದೀಪ್ ಕುಮಾರ್, ಬಾಲಾಜಿ ಡೀಲರ್ ಮುರಳೀಧರ್ ಪ್ರಭು, ಉಳ್ಳಾಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್, ಕೊಣಾಜೆ ಗ್ರಾಪಂ ಮಾಜಿ ಸದಸ್ಯ ಹಸನ್ ಕುಂಞಿ, ಜಮೀಯತುಲ್ ಫಲಾಹ್ ದಮಾಮ್ ಘಟಕ ಮುಖ್ಯಸ್ಥ ಮನ್ಸೂರ್ ಅಲಿ, ಪ್ರತಿನಿಧಿ ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.ಗಣೇಶ್ ಪ್ರಸಾದ್ ಮಂಚಿ ಕಾರ್ಯಕ್ರಮ ನಿರೂಪಿಸಿದರು.
ಪೆಟ್ರೋಲ್ ಪಂಪ್‌ಗಳಲ್ಲಿ ವ್ಯಾಪಾರ, ವ್ಯವಹಾರ ಹೊರತು ಸಾರ್ವಜನಿಕ ಸೇವೆ ವಿರಳ. ಸಾರ್ವಜನಿಕರಿಗೆ ಪ್ರಯೋಜನ ಆಗುವ ಕಾರ್ಯಕ್ರಮ ಹಮ್ಮಿಕೊಂಡರೆ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯ.
ಕೆಕೆ ನಾಸೀರ್ ನಡುಪದವು ಮುಖ್ಯಸ್ಥ ಕೊಣಾಜೆಕಾರ್ಸ್ ಫ್ಯೂಯಲ್, ಪಂಜಿಮೊಗರು