

ಹುಬ್ಬಳ್ಳಿ: ದಿ ಹುಬ್ಬಳ್ಳಿ ಕೋ-ಆಪರೇಟಿವ್ ಹಾಸ್ಪಿಟಲ್ ಸೊಸೈಟಿ ಹಾಗೂ ಕೆಎಲ್ಇ ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ ಸಹಯೋಗದಲ್ಲಿ ಆ. 11ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಗರದ ಕೊಯಿನ್ ರಸ್ತೆಯ ಕೆಎಲ್ಇ ಕೋ-ಆಪರೇಟಿವ್ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಮದ್ರಾಸ್ ಐ ಬಗ್ಗೆ ಮಾಹಿತಿ, ಮಧುಮೇಹ ಇದ್ದವರಿಗೆ ಕಣ್ಣಿನ ವಿಶೇಷ ತಪಾಸಣೆ, ಕಣ್ಣಿನ ಪೊರೆ ತಪಾಸಣೆ, ಕಣ್ಣಿನ ಕನ್ನಡಕ ನಂಬರ್ ತಪಾಸಣೆ ಮಾಡಲಾಗುವುದು. ಹುಬ್ಬಳ್ಳಿ ಶಹರ ಹಾಗೂ ಸುತ್ತ್ತನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಸ್ಥೆ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಲಿಂಗರಾಜ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.