

ಹುಬ್ಬಳ್ಳಿ: ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರ, ಐ ಬಡ್ಡಿ ಕಣ್ಣಿನ ಆಸ್ಪತ್ರೆ ಮತ್ತು ಜೆ.ವಿ. ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಗರದ ಪಾಲಿಕೆ ಕಚೇರಿಯ ಸಭಾ ಭವನದಲ್ಲಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಬುಧವಾರ ಏರ್ಪಡಿಸಲಾಗಿತ್ತು. ನಂತರ ಉಚಿತವಾಗಿ ಔಷಧ ವಿತರಿಸಲಯಿತು. ಕೆಲವರಿಗೆ ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಲಾಯಿತು.
ಮೇಯರ್ ವೀಣಾ ಬರದ್ವಾಡ, ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪರಿವಾರ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ಶಿಬಿರದ ಚೇರ್ಮನ್ ಡಾ. ವರುಣ ಸವಡಿ, ಸಹ ಚೇರ್ಮನ್ ಡಾ. ವಿರೂಪಾಕ್ಷ, ಪರಿವಾರದ ಅಧ್ಯಕ್ಷ ಶ್ರಿಕಾಂತ ಕರಿ, ಸಂತೋಷ ಪಾಟೀಲ, ಮೋಹನ ಸುತಾರ, ಡಾ. ಪ್ರಕಾಶ, ಮಹಾವೀರ ಕುಂದೂರ, ಆನಂದ ಭೂಮಿರೆಡ್ಡಿ, ಶ್ರೇಣಿಕ ರಾಜಮಾನೆ, ರೆಹಾನಾ ಕೊತ್ವಾಲ ಇತರರು ಇದ್ದರು.