

ಕುಂದಾಪುರ: ಜಿಪಂ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ವೈದ್ಯಕೀಯ ವಿಭಾಗ, ಮಾಹೆ ಮಣಿಪಾಲ, ಗ್ರಾಪಂ ಗಂಗೊಳ್ಳಿ, ರೋಟರಿ ಕ್ಲಬ್ ಗಂಗೊಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ಶ್ರೀ ಅನ್ನಪೂರ್ಣ ಸೇವಾ ಬಂಧು ಟ್ರಸ್ಟ್ ಕುಂದಾಪುರ, ದೈವಜ್ಞ ಬ್ರಾಹ್ಮಣರ ಸಂಘ, ಶ್ರೀ ವೀರ ವಿಠಲ ದೇವಸ್ಥಾನ ಗಂಗೊಳ್ಳಿ ಮತ್ತು ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಆಶ್ರಯದಲ್ಲಿ ನೇತ್ರ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ನಡೆಯಿತು.
ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಶಿಬಿರ ಉದ್ಘಾಟಿಸಿದರು. ಕೆಎಂಸಿ ಮಣಿಪಾಲದ ವೈದ್ಯಾಧಿಕಾರಿ ಡಾ.ಸಾಚಿ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಸಂಚಾಲಕ ಶಂಕರ ಶೆಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ, ಶ್ರೀ ಅನ್ನಪೂರ್ಣ ಸೇವಾ ಬಂಧು ಟ್ರಸ್ಟ್ ಗೌರವಾಧ್ಯಕ್ಷ ಕೆ.ಆರ್.ನಾಯ್ಕ, ದೈವಜ್ಞ ಬ್ರಾಹ್ಮಣರ ಸಂಘದ ಕಾರ್ತಿಕ್ ಶೇಟ್ ಉಪಸ್ಥಿತರಿದ್ದರು.
ಕೆ.ರಾಮನಾಥ ನಾಯಕ್ ಪ್ರಸ್ತಾವನೆಗೈದರು. ಸಾಯಿನಾಥ್ ಶೇಟ್ ವಂದಿಸಿ, ಆರೋಗ್ಯ ಕೇಂದ್ರ ಸಿಬ್ಬಂದಿ ಚಂದ್ರಕಲಾ ತಾಂಡೇಲ ನಿರ್ವಹಿಸಿದರು.