ಗಣೇಶನ ಹೆಸರಿರುವ 100 ಮಂದಿಗೆ ಚೌತಿಯಂದು ವಂಡರ್​ ಲಾಗೆ ಉಚಿತ ಪ್ರವೇಶ..

Wonder La
Published on

ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ ಲಾ ಹಾಲಿಡೇಸ್ ಲಿಮಿಟೆಡ್ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ ಘೋಷಿಸಿದೆ.

ಗಣೇಶನ 108 ಹೆಸರುಗಳಲ್ಲಿ ನಿಮ್ಮ ಹೆಸರೂ ಒಂದಾಗಿದ್ದರೆ, ನೀವು ಆಗಸ್ಟ್ 31ರಂದು ವಂಡರ್‌ ಲಾ ಪಾರ್ಕ್‌ಗೆ ಉಚಿತ ಪ್ರವೇಶ ಪಡೆಯಬಹುದು. ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ವಂಡರ್‌ಲಾ ಪಾರ್ಕ್‌ಗಳಾದ್ಯಂತ ಮೊದಲ 100 ಆಫ್‌ಲೈನ್ ಬುಕಿಂಗ್‌ಗಳಿಗೆ ಈ ಕೊಡುಗೆ ಅನ್ವಯವಾಗಲಿದೆ.

ಈ ಆಫರ್‌ ಪಡೆಯಲು ಬಯಸುವವರು ವಂಡರ್‌ ಲಾಗೆ ಭೇಟಿ ನೀಡುವ ವೇಳೆ ಯಾವುದಾದರೊಂದು ಗುರುತಿನ ಚೀಟಿ ತಂದಿರುವುದು ಕಡ್ಡಾಯವಾಗಿದೆ. ಹೆಚ್ಚಿನ ವಿವರಗಳಗಾಗಿ 080-37230333 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net