

ಕುಂದಾಪುರ: ರಾಜ್ಯದಲ್ಲಿ ಉಚಿತ ವಿದ್ಯುತ್ ಯೋಜನೆ ಇದ್ದರೂ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 57 ಸಾವಿರ ಸಂಪರ್ಕಗಳಿಗೆ ಉಚಿತ ಭಾಗ್ಯ ಇಲ್ಲ. ಆದ್ದರಿಂದ ಅಂತಹವರನ್ನು ಸೂರ್ಯಘರ್ ಯೋಜನೆಯ ಫಲಾನುಭವಿಗಳನ್ನಾಗಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 5,464 ಅರ್ಜಿಗಳು ಬಂದಿದ್ದು 5,463 ಮಂಜೂರಾಗಿದೆ. 579 ಕುಟುಂಬಕ್ಕೆ ಸಬ್ಸಿಡಿ ಬಂದಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ಜೂನಿಯರ್ ಕಾಲೇಜಿನ ಕಲಾ ಮಂದಿರದಲ್ಲಿ ಪುರಸಭೆ ವತಿಯಿಂದ ಶುಕ್ರವಾರ ಜರುಗಿದ ಪ್ರಧಾನಮಂತ್ರಿ ಸೂರ್ಯ ರ್ ಯೋಜನೆಯ ವಾಹಿತಿ ಹಾಗೂ ಫಲಾನುಭವಿಗಳಿಗೆ ಸವಲತ್ತು, ಸಬ್ಸಿಡಿ ವಿತರಣೆ ಉದ್ಘಾಟಿಸಿ ವಾತನಾಡಿದರು.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸಿಗುವ ಕಾರಣ ಪ್ರಧಾನಮಂತ್ರಿ ಸೂರ್ಯ ರ್ ಯೋಜನೆಗೆ ಹಿನ್ನಡೆಯಾಗಿದೆ. ಉಚಿತ ವಿದ್ಯುತ್ ಪಡೆಯದವರನ್ನು ಗುರಿಯಾಗಿಸಿ ಯೋಜನೆಯನ್ನು ಮನದಟ್ಟು ವಾಡಿ ಫಲಾನುಭವಿಗಳನ್ನಾಗಿಸುವ ಕಾರ್ಯ ಪ್ರಗತಿಯಲ್ಲಿದೆ. 1 ಕಿವ್ಯಾ.ಗೆ 2.5 ಲಕ್ಷ ರೂ.ವೆಚ್ಚವಿದ್ದು ಬ್ಯಾಂಕ್ ಸಾಲ ನೀಡುತ್ತದೆ. ಇದರಲ್ಲಿ 75 ಸಾವಿರ ರೂ. ಸಬ್ಸಿಡಿ ದೊರೆಯುತ್ತದೆ. ಸೋಲಾರ್ ಪಾನೆಲ್ 25 ವರ್ಷ ಬಾಳಿಕೆ ಬರುತ್ತದೆ. ಕುಂದಾಪುರದಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ವಾಡಲಾಗುತ್ತಿದ್ದು ಇಲ್ಲಿ ಅಳವಡಿಸಿದ 172 ಮಂದಿ ಪೈಕಿ 142 ಮಂದಿಗೆ ಸಬ್ಸಿಡಿ ಬಂದಿದೆ ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಸೆಲ್ಕೋ ಸೋಲಾರ್ ಸಂಸ್ಥೆ ಡಿಜಿಎಂ ಗುರುಪ್ರಸಾದ್ ಶೆಟ್ಟಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಯಶವಂತ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಉಪಸ್ಥಿತರಿದ್ದರು. ಪುರಸಭೆ ಸದಸ್ಯ ಶೇಖರ ಪೂಜಾರಿ ಸ್ವಾಗತಿಸಿದರು. ರತ್ನಾಕರ ಕಾರ್ಯಕ್ರಮ ನಿರ್ವಹಿಸಿದರು.
ಸರ್ಕಾರ ನೀಡುವ ಉತ್ತಮ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಿದಾಗ ಮಾತ್ರವೇ ಯಶಸ್ಸಾಗಲು ಸಾಧ್ಯವಾಗುತ್ತದೆ - ಕಿರಣ್‌ಕುಮಾರ್ ಕೊಡ್ಗಿ, ಶಾಸಕ https://www.vijayavani.net/seedling-camp-at-thekkatte-seva-sangama-vidyakendra https://www.vijayavani.net/the-greatest-of-all-donations-is-blood-donation