ವಾಗ್ದೇವಿ ವಿದ್ಯಾಕುಲದಲ್ಲಿ ಉಚಿತ ಶಿಕ್ಷಣ

Published on

ಮೈಸೂರು: ಹುಣಸೂರು ರಸ್ತೆಯ ಮನುಗನಹಳ್ಳಿ ಚೆಕ್‌ಪೋಸ್ಟ್ ಬಳಿಯ ವಾಗ್ದೇವಿ ವಿದ್ಯಾಕುಲ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಸಾಲಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ಅಪಾರ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಯು.ಆರ್.ರುಕ್ಮಿಣಿ ಮನವಿ ಮಾಡಿದರು.

ಟ್ರಸ್ಟ್ 2022ರಲ್ಲಿ ಪ್ರಾರಂಭವಾಗಿದ್ದು, ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಬಡ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ, ಪಂಗಡಗಳಲ್ಲಿದ್ದು, ತಂದೆ, ತಾಯಿ, ಪೋಷಕರ ಪ್ರೀತಿಯಿಂದ ವಂಚಿತರಾದವರಿಗೆ ವಿದ್ಯಾಭ್ಯಾಸ ಹಾಗೂ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠ್ಯಿಯಲ್ಲಿ ಹೇಳಿದರು.

ಇದೇ ರೀತಿ ಈಗಲೂ ಕಾಲೇಜಿನ ಹಲವಾರು ವಿದ್ಯಾರ್ಥಿಗಳಿಗೆ ಈ ಪ್ರಯೋಜನ ನೀಡಲಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಮಾಹಿತಿಗೆ ಮೊಬೈಲ್ 98450 08337 ಅನ್ನು ಸಂಪರ್ಕಿಸಬೇಕು ಎಂದು ಹೇಳಿದರು.

ಕಾಲೇಜಿ ಪ್ರಾಂಶುಪಾಲ ಪ್ರಕಾಶ್, ಸಿಬ್ಬಂದಿ ಅನುಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net