ಮೂಲವ್ಯಾಧಿಗೆ ಉಚಿತ ಔಷಧ ವಿತರಣೆ

New Medicines
Published on

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಹೆಗ್ಗೇರಿಯಲ್ಲಿರುವ ಆಯುರ್ವೆದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಶಲ್ಯತಂತ್ರ ವಿಭಾಗ ವತಿಯಿಂದ ಜು. 20 ರಂದು ಮೂಲವ್ಯಾಧಿ ರೋಗಕ್ಕೆ ವಿಶೇಷ ತಪಾಸಣೆ ಹಾಗೂ ಉಚಿತ ಔಷಧ ವಿತರಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಗುದಗತ ರಕ್ತಸ್ರಾವ, ಮೊಳಕೆ, ಗಂಟು, ನೋವು, ಮಲಬದ್ದತೆ, ಉರಿ ಮುಂತಾದ ಲಕ್ಷಣಗಳುಳ್ಳ ಆಸಕ್ತ ರೋಗಿಗಳು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ಹಾಗೂ ಶಲ್ಯ ತಂತ್ರ ವಿಭಾಗದ ಮುಖ್ಯಸ್ಥ ಡಾ. ತ್ಯಾಗರಾಜ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net