ಬಿಪಿ, ಸಕ್ಕರೆ ಕಾಯಿಲೆಗೆ ಮಾತ್ರೆ ಉಚಿತ ವಿತರಣೆ

ಕೆ.ಆರ್.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಲ್ಪಶ್ರೀ ಉದ್ಘಾಟಿಸಿದರು. ಜಿ.ಸುರೇಂದ್ರಮೂರ್ತಿ, ಡಾ.ಡಿ.ನಟರಾಜ್ ಇದ್ದರು.
ಕೆ.ಆರ್.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಲ್ಪಶ್ರೀ ಉದ್ಘಾಟಿಸಿದರು. ಜಿ.ಸುರೇಂದ್ರಮೂರ್ತಿ, ಡಾ.ಡಿ.ನಟರಾಜ್ ಇದ್ದರು.
Published on

ಕೆ.ಆರ್.ನಗರ: ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಗೃಹ ಆರೋಗ್ಯ ಕಾರ್ಯಕ್ರಮದಡಿ ಬಿಪಿ ಮತ್ತು ಸಕ್ಕರೆ ಕಾಯಿಲೆ ಮಾತ್ರೆಗಳನ್ನು ಉಚಿತವಾಗಿ ಪ್ರತಿ ಮನೆಗೆ ಮುಂದಿನ ತಿಂಗಳಿನಿಂದ ತಲುಪಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಗುರುವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಧುಮೇಹ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯಕರ ಜೀವನ ಶೈಲಿ, ಸೂಕ್ತ ಆಹಾರ ಪದ್ಧತಿ, ದೇಹಕ್ಕೆ ಅಗತ್ಯ ವ್ಯಾಯಮ ಹಾಗೂ ನಿರಂತರ ತಪಾಸಣೆ ಮೂಲಕ ಸಕ್ಕರೆ ಕಾಯಿಲೆಯನ್ನು ಸೋಲಿಸಬಹುದು ಎಂದರು.

ಆಧುನಿಕ ಜೀವನಶೈಲಿ, ಕಳಪೆ ಆಹಾರ, ಒತ್ತಡ ಜೀವನದಿಂದಾಗಿ ಚಿಕ್ಕ ವಯಸ್ಸಿನವರಲ್ಲೇ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಆದರೆ, ಈ ಬಗ್ಗೆ ಆತಂಕ ಮತ್ತು ಭಯ ಪಡೆದೆ ಅಡೆತಡೆಗಳನ್ನು ನಿವಾರಿಸಿಕೊಂಡರೆ ಕಾಯಿಲೆಯನ್ನು ಹಿಮ್ಮೆಟ್ಟಿಸಬಹುದಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಈ ಸಂದರ್ಭ ಕಾಯಿಲೆ ಇರುವುದು ತಿಳಿದು ಬಂದರೆ ಚಿಕಿತ್ಸೆ ಪಡೆದುಕೊಳ್ಳಬಹುದು. ಅಲ್ಲದೆ ಸಕ್ಕರೆ ಕಾಯಿಲೆ ಹೆಚ್ಚು ಇರುವ ರಾಜ್ಯಗಳಲ್ಲಿ ಕರ್ನಾಟಕ ಹತ್ತನೇ ಸ್ಥಾನದಿಂದ ಹೊರಗಿದೆ ಎಂದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಕಲ್ಪಶ್ರೀ ಮಾತನಾಡಿ, ಒತ್ತಡ ರಹಿತ ಕರ್ತವ್ಯ ನಿರ್ವಹಣೆ ಮತ್ತು ಜೀವನಶೈಲಿಯಿಂದ ಸಕ್ಕರೆ ಕಾಯಿಲೆಯಿಂದ ದೂರವಿರಬಹುದು ಎಂದರು.

ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ್, ಶಿರಸ್ತೇದಾರರಾದ ಅಸ್ಲಾಂ ಭಾಷಾ, ದೀಪಕ್, ಯೋಗಾಚಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net