ಅಂಗವಿಕಲರಿಗೆ ಉಚಿತ ಸಾಧನ ಸಲಕರಣೆ ವಿತರಣೆ

Free distribution of equipment to the disabled
Free distribution of equipment to the disabled
Published on

ವಿಜಯಪುರ: ಸ್ಥಳೀಯ ನಿಜಸುಖಿ ಹಡಪದ ಅಪ್ಪಣ ದೇವಸ್ಥಾನ ಆರಾಧನಾ ಸಮಿತಿ ಚಾರಿಟೇಬಲ್ ಟ್ರಸ್ಟ್ನ ಮೊದಲನೇ ವಾರ್ಷಿಕೋತ್ಸವ ಅಂಗವಾಗಿ ಇತ್ತೀಚೆಗೆ ಅಂಗವಿಕಲರಿಗೆ ಉಚಿತ ಸಾಧನ ಸಲಕರಣೆ ವಿತರಿಸಲಾಯಿತು.

ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಸಾನ್ನಿಧ್ಯ, ಸಹಕಾರಿ ಧುರೀಣ ರಮೇಶ ಬಿದನೂರ ಅಧ್ಯಕ್ಷತೆ ವಹಿಸಿದ್ದರು. ಬಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಕಾರ್ಯಕ್ರಮ ಉದ್ಘಾಟಿಸಿದರು.

ಶ್ರೀ ದಾಸ ಸೂರ್ಯವಂಶ ಆಯುಕ್ತ ಶಿವ ಶಾಂತವೀರ ದಿವಾಕರ್, ಜಿಲ್ಲಾ ಅಂಗವಿಕಲ ಕಲ್ಯಾಣಾಽಕಾರಿ ಜಗದೀಶ ಕೆ., ಮಲ್ಲಿಕಾರ್ಜುನ ಹಿರೇಮಠ, ಸಂತೋಷ ತಲಕೇರಿ, ಪ್ರಜ್ಞೇಶೀಲ ಖ್ಯಾತನ್, ರಾಹುಲ್ ಕುಬಕಡ್ಡಿ, ಶ್ರೀಶೈಲಗೌಡ ಬಿರಾದಾರ, ಭೀಮಾಶಂಕರ ಹಡಪದ ಉಪಸ್ಥಿತರಿದ್ದರು.

ರಾಜ್ಯ ಆಯುಕ್ತ ದಾಸ ಸೂರ್ಯವಂಶ ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ನೇರಳೆ ದಿನಾಚರಣೆ ವಿಜೃಭಣೆಯಿಂದ ಆಚರಿಸಲು ಎಲ್ಲ ಅಂಗವಿಕಲರು ಹಾಗೂ ಸಂಘ- ಸಂಸ್ಥೆಗಳಿಗೆ ಆಹ್ವಾನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net