ಬಿಎಂಟಿಸಿ ಸಿಬ್ಬಂದಿಗೆ ಉಚಿತ ಡಯಾಲಿಸಿಸ್​

bmtc (1)
Published on

ಬೆಂಗಳೂರು: ಬಿಎಂಟಿಸಿ ನೌಕರರ ಆರೋಗ್ಯ ಕಾಪಾಡುವ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆ್ರೋ ಯೂರಾಲಜಿ ಸಂಸ್ಥೆಯೊಂದಿಗೆ ಐದು ವರ್ಷದ ಅವಧಿಗೆ ವೈದ್ಯಕಿಯ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ನಿಗಮದ ನೌಕರರು ಉಚಿತ ಡಯಾಲಿಸಿಸ್​ ಸೇವೆ ಪಡೆಯಬಹುದಾಗಿದೆ.
ಈ ಹಿಂದೆ ನೆಪ್ರೋ ಯೂರಾಲಜಿಯೊಂದಿಗೆ ಐದು ವರ್ಷದ ಅವಧಿಗೆ ಮಾಡಿಕೊಂಡಿದ್ದ ವೈದ್ಯಕಿಯ ಒಡಂಬಡಿಕೆ ಆಗಸ್ಟ್​ನಲ್ಲಿ ಅಂತ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಸೆಪ್ಟೆಂಬರ್​ 1ರಿಂದ ಅನ್ವಯವಾಗುವಂತೆ ಇದೀಗ ಮತ್ತೆ ಐದು ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿರುವ ನಿಗಮದ ತರಬೇತಿ, ಕಾಯಂ ಹಾಗೂ ನಿವೃತ್ತ ಅಧಿಕಾರಿ ಹಾಗೂ ನೌಕರರು ನೆ್ರೋ ಯೂರಾಲಜಿ ಸಂಸ್ಥೆಯಲ್ಲಿ ಉಚಿತ ಡಯಾಲಿಸಿಸ್​ ಚಿಕಿತ್ಸೆ ಪಡೆಯಬಹುದಾಗಿದೆ.
ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನೌಕರರು ತಾವು ಕಾರ್ಯನಿರ್ವಹಿಸುತ್ತಿರುವ ವಿಭಾಗದ ಮುಖ್ಯಸ್ಥರು ಅಥವಾ ಟಕ ವ್ಯವಸ್ಥಾಪಕರ ದೃಢೀಕೃತ ಶಿಫಾರಸು ಪತ್ರ, ಗುರುತಿನ ಚೀಟಿ ಹಾಗೂ ವೇತನ ಚೀಟಿಯ ಪ್ರತಿಯನ್ನು ಸಲ್ಲಿಸಬೇಕಿದೆ. ನಿವೃತ್ತ ನೌಕರರು ಹಾಗೂ ಅಧಿಕಾರಿಗಳು ಚಿಕಿತ್ಸೆ ಪಡೆಯಲು ಸೇವೆಯಿಂದ ನಿವೃತ್ತರಾದಾಗ ವಿತರಿಸಲಾದ ನಿವೃತ್ತಿ ಆದೇಶ ಪ್ರತಿ ಹಾಗೂ ಚಾಲ್ತಿಯಲ್ಲಿರುವ ಬಸ್​ ಪಾಸ್​ಗೆ ಗೆಜೆಟೆಡ್​ ಅಧಿಕಾರಿಯಿಂದ ದೃಢೀಕರಿಸಿದ ಪ್ರತಿಯನ್ನು ನೀಡಬೇಕಿದೆ.
ಈ ಒಪ್ಪಂದದ ಪ್ರಕಾರ ಡಯಾಲಿಸಿಸ್​ ಚಿಕಿತ್ಸೆ ಮಾತ್ರ ಉಚಿತವಾಗಿದ್ದು, ಉಳಿದಂತೆ ವೈದ್ಯಕಿಯ ತಪಾಸಣೆ, ಪರೀಕ್ಷೆಗಳು, ಔಷಧಿ ವೆಚ್ಚ ಹಾಗೂ ಒಳ ಅಥವಾ ಹೊರರೋಗಿ ನೋಂದಣಿ ವೆಚ್ಚವನ್ನು ನೌಕರರೇ ಪಾವತಿಸಬೇಕು. ಡಯಾಲಿಸಿಸ್​ ಚಿಕಿತ್ಸೆ ಉಚಿತವಾಗಿರುವುದರಿಂದ ನೌಕರರು ಚಿಕಿತ್ಸಾ ವೆಚ್ಚ ಮರುಪಾವತಿಗೆ ಅಜಿರ್ ಸಲ್ಲಿಸುವಂತಿಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಪತ್ತೆಯಾದರೆ ಆ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net