ಮಧುಮೇಹ ರೋಗ ಉಚಿತ ತಪಾಸಣೆ ಶಿಬಿರ

Free diabetes check-up camp
ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಡಾ. ವಿಜಯೀಂದ್ರ ಕಣಬೂರ ರೋಗಿಗಳ ತಪಾಸಣೆ ನಡೆಸಿದರು.
Published on

ವಿಜಯಪುರ: ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮದಲ್ಲಿ ಭಾನುವಾರ ಮಧುಮೇಹ ರೋಗ ಉಚಿತ ತಪಾಸಣೆ ಶಿಬಿರ ನಡೆಯಿತು.

ವಿಜಯಪುರದ ಬಿಡಿಈ ಸಂಸ್ಥೆಯ ಮಹಿಳಾ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಶಿಬಿರದ ಅಂಗವಾಗಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಕಣಬೂರ ಡಯಾಬಿಟಿಸ್ ಹೆಲ್ತ್ ಕೇರ್‌ನ ಡಾ. ವಿಜಯೀಂದ್ರ ಕಣಬೂರ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.

80 ಕ್ಕೂ ಅಧಿಕ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸುವ ಮೂಲಕ ಮಧುಮೇಹ ಕುರಿತು ಸಲಹೆ ಪಡೆದರು. ಶಿಬಿರದಲ್ಲಿ ಸಂಸ್ಥೆಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಗೋಪಾಲ ದೇಶಪಾಂಡೆ, ಹರೀಶ ಕುಲಕರ್ಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net