ಉಚಿತ ದಂತ ತಪಾಸಣೆ ಶಿಬಿರ

17 Jaggu 5
ಬೆಳಗಾವಿ ವೈಟ್ ಡೆಂಟಲ್ ಕ್ಲಿನಿಕ್‌ನಿಂದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಜರುಗಿತು. ಡಾ. ಸ್ನೇಹಾ ಗುರ್ಜರ್, ಡಾ. ನಿಖಿತಾ ಗುರ್ಜರ್, ಡಾ. ವೈಷ್ಣವಿ, ವಿದ್ಯಾರ್ಥಿಗಳು ಇತರರಿದ್ದರು.
Published on

ಬೆಳಗಾವಿ: ವೈಟ್ ಡೆಂಟಲ್ ಕ್ಲಿನಿಕ್‌ನಿಂದ ಟಿಳಕವಾಡಿ ಶಾಂತಿನಗರದ ಆರ್ಷ ವಿದ್ಯಾ ಆಶ್ರಮದಲ್ಲಿ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ ಬಡ ಮತ್ತು ನಿರ್ಗತಿಕ ವಿದ್ಯಾರ್ಥಿಗಳಿಗೆ ಈಚೆಗೆ ದಂತ ತಪಾಸಣೆ ಮತ್ತು ಚಿಕಿತ್ಸಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ, ಮಹಾರಾಷ್ಟ್ರ ಮತ್ತು ಈಶಾನ್ಯ ಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ಲಿನಿಕ್‌ನಿಂದ ಸಮಗ್ರ ದಂತ ತಪಾಸಣೆ ಮಾಡಿ, ವಿದ್ಯಾರ್ಥಿಗಳಿಗೆ ಉಚಿತ ಟೂತ್ ಪೇಸ್ಟ್ ವಿತರಿಸಲಾಯಿತು. ಜತೆಗೆ ಬಾಯಿ ಆರೋಗ್ಯದ ಜಾಗೃತಿ ಮೂಡಿಸಲಾಯಿತು. ಡಾ. ಸ್ನೇಹಾ ಗುರ್ಜರ್ ಮಾತನಾಡಿ, ವೈಟ್ ಡೆಂಟಲ್ ಕ್ಲಿನಿಕ್‌ಗೆ ಸಾಮಾಜಿಕ ಜವಾಬ್ದಾರಿಯೂ ಇದೆ. ವಿದ್ಯಾರ್ಥಿಗಳು ಹಾಗೂ ಸಮುದಾಯದ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಡಾ. ನಿಖಿತಾ ಗುರ್ಜರ್, ಡಾ. ವೈಷ್ಣವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net