ಉಚಿತ ದಂತ ತಪಾಸಣೆ

Free dental checkup
Published on

ಮಡಿಕೇರಿ

ಮೇಕೇರಿಯ ಸ್ವಾಗತ ಯುವಕ ಸಂಘ ನೇತೃತ್ವದಲ್ಲಿ ಶನಿವಾರ ಮೇಕೇರಿ ಸÀರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣೆ ನಡೆಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ದಂತ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ದೀಪಾ ಮಕ್ಕಳ ದಂತ ತಪಾಸಣೆ ನಡೆಸಿದರು. ಹಲ್ಲಿನ ಮಹತ್ವ, ಉಂಟಾಗಬಹದಾದ ಸಮಸ್ಯೆಗಳು, ಬ್ರಶ್ ಮಾಡುವ ವಿಧಾನಗಳ ಬಗ್ಗೆ ವೈದ್ಯರು ಮಕ್ಕಳಿಗೆ ಮಾಹಿತಿ ನೀಡಿದರು. ಹಲ್ಲಿನ ಗಂಭೀರ ಸಮಸ್ಯೆಯಿರುವ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಕರೆ ತರುವಂತೆ ತಿಳಿಸಲಾಯಿತು.

ಮೇಕೇರಿ ಸÀರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ದಂತ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ಸ್ವಾಗತ ಯುವಕ ಸಂಘದ ಅಧ್ಯಕ್ಷ ಟಿ.ಎನ್. ಉಮೇಶ್, ಕಾರ್ಯದರ್ಶಿ ಪವನ್, ಖಜಾಂಚಿ ಭವನ್, ಕಾರ್ಯಕಾರಿ ಸಮಿತಿ ಸದಸ್ಯ ಲತೀ, ಗ್ರಾ.ಪಂ. ಸದಸ್ಯೆ ಸುಶೀಲಾ ಮಧು, ಶಾಲಾ ಮುಖ್ಯೋಪಾಧ್ಯಾಯಿನಿ ಸಬಿತಾ ಹಾಗೂ ಶಾಲಾ ಶಿಕ್ಷಕರು ಇದ್ದರು.

ದಂತ ತಪಾಸಣೆಯ ನಂತರ ಶಾಲಾ ಮಕ್ಕಳಿಗೆ ಟೂತ್ ಬ್ರಶ್ ಹಾಗೂ ಟೂಥ್ ಪೇಸ್ಟ್ ಉಚಿತವಾಗಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net