ಶುಚಿತ್ವ ಕಾಪಾಡಿಕೊಂಡರೆ ಅನಾರೋಗ್ಯದಿಂದ ದೂರ: ನೆಹರು ಯುವಕೇಂದ್ರ ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು ಸಲಹೆ

Free Dental Check up Campaign Mandya
Published on

ಮಂಡ್ಯ: ಮಕ್ಕಳ ಕೈಗಳು ಮತ್ತು ಬಾಯಿ ಶುಚಿತ್ವದಿಂದ ಕೂಡಿದ್ದರೆ ಸಾಕಷ್ಟು ಅನಾರೋಗ್ಯ ಬರುವುದಿಲ್ಲ ಎಂದು ನೆಹರು ಯುವಕೇಂದ್ರ ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು ಹೇಳಿದರು.

ನಗರದ ಗುತ್ತಲು ಬಡಾವಣೆಯ ಅರಳೀಮರ ಸರ್ಕಾರಿ ಶಾಲೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ, ಭಾರತೀಯ ದಂತ ವೈದ್ಯಕೀಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ದಂತ ಉಚಿತ ಚಿಕಿತ್ಸಾ ತಪಾಸಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಶುಚಿತ್ವ ಮತ್ತು ಶಿಸ್ತಿಗೆ ಹೆಚ್ಚು ಮಹತ್ವ ನೀಡಿದರೆ ವಿದ್ಯಾರ್ಜನೆಗೆ ಅನುಕೂಲವಾಗುತ್ತದೆ. ಆರೋಗ್ಯ ಗುಣಮಟ್ಟದಿಂದ ಕೂಡಿರುತ್ತದೆ. ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ನುಡಿದರು.

ದಂತರೋಗ ತಜ್ಞೆ ಡಾ.ನಿಸರ್ಗ ಅರುಣಾನಂದ, ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಎದುರಾದಾಗ ಗೂಗಲ್ ಮೂಲಕವೇ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ವೈದ್ಯರನ್ನು ಸಂಪರ್ಕಿಸುವುದನ್ನೇ ಮರೆಯುತ್ತಿದ್ದಾರೆ. ಗೂಗಲ್ ಮಾಹಿತಿ ಸಂಪೂರ್ಣವಾಗಿ ಇರಲ್ಲ ಎಂದು ಎಚ್ಚರಿಸಿದರು.

ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ನಗರಸಭಾ ಸದಸ್ಯರಾದ ಶೀನಿವಾಸ್, ವಿಶಾಲಾಕ್ಷಿ, ಮಂಜುಳಾ ರಮೇಶ್, ಕುಮಾರದಾಸ್, ಬಿ.ಎಸ್.ಶಂಕರಯ್ಯ, ಪುಷ್ಪಾ, ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net