

ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗ ಹಾಗೂ ಎ.ಜೆ. ದಂತ ವೈದ್ಯಕೀಯ ಕಾಲೇಜು
ಸಹಯೋಗದಲ್ಲಿ ಮಂಗಳೂರು ಬಸ್ಸು ನಿಲ್ದಾಣದಲ್ಲಿ ಪ್ರತೀ ಗುರುವಾರ ಉಚಿತ ದಂತ ತಪಾಸಣೆ, ದಂತ ಚಿಕಿತ್ಸಾ ಶಿಬಿರ ಮತ್ತು ತಂಬಾಕು ನಿಷೇಧ ಸಮಾಲೋಚನೆ ಆಯೋಜಿಸಲಾಗಿದೆ. ಶಿಬಿರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ವರೆಗೆ ಉಚಿತವಾಗಿ ದಂತ ತಪಾಸಣೆ, ಹಲ್ಲನ್ನು ಶುಚಿಗೊಳಿಸುವುದು, ಹುಳುಕಾದ ಹಲ್ಲನ್ನು ತುಂಬಿಸುವುದು, ಹಲ್ಲು ಕೀಳುವುದು ಹಾಗೂ ತಂಬಾಕು ನಿಷೇಧ ಸಮಾಲೋಚನೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.