ದಾವಣಗೆರೆಯಲ್ಲಿ ಉಚಿತ ಸಾಮೂಹಿಕ ಉಪನಯನ

Free, Collective, Shankara, Seva Sangha,
Published on

ದಾವಣಗೆರೆ: ಶಂಕರ ಸೇವಾ ಸಂಘದ ವತಿಯಿಂದ ಉಚಿತ ಸಾಮೂಹಿಕ ಉಪನಯನವನ್ನು ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ ಹಾಗೂ ಇತರ ಊರುಗಳಿಂದ ಬಂದಿದ್ದ ವಟುಗಳಿಗೆ ಬ್ರಹ್ಮೋಪದೇಶ ನೀಡಲಾಯಿತು.

ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಅವರ ಶಿಷ್ಯರಾದ ಪುಟ್ಟಸ್ವಾಮಿ, ರಾಮಕೃಷ್ಣರಾವ್, ಜಯರಾಮ್, ನಾರಾಯಣ ಜೋಶಿ, ಪವನ್, ಹರೀಶ್ ಮುಂತಾದವರು ಬ್ರಹ್ಮೋಪದೇಶವನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.

ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ, ಕಾರ್ಯದರ್ಶಿ ಶ್ರೀನಿವಾಸ ಜೋಶಿ, ಪದಾಧಿಕಾರಿಗಳಾದ ವಿನಾಯಕ ಜೋಶಿ, ಸುಬ್ರಹ್ಮಣ್ಯ ಟಿ, ಮೋತಿ ಸುಬ್ರಮಣ್ಯ, ದೇವಸ್ಥಾನದ ಅರ್ಚಕರು, ಮ್ಯಾನೇಜರ್ ರಮೇಶ್ ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net