

ಮೈಸೂರು: ಮಾಡುವ ಕೆಲಸವನ್ನು ನಾಳೆ ಎಂದು ಮುಂದೂಡದೆ ಇಂದೇ ಮಾಡಿ ಮುಗಿಸಬೇಕು. ಇದರಿಂದ ಯಶಸ್ಸಿನ ಹೆದ್ದಾರಿ ತನಗೆ ತಾನೇ ತೆರೆದುಕೊಳ್ಳುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು.
ಜ್ಞಾನಬುತ್ತಿ ಸಂಸ್ಥೆಯಿಂದ ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಯುಜಿಸಿ ನೆಟ್ ಮತ್ತು ಕೆಸೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ವಾತನಾಡಿದರು.
ಯುವಪೀಳಿಗೆ ಇಂದು ವಾಡುವ ಕೆಲಸವನ್ನು ನಾಳೆ ವಾಡಿದರಾಯಿತು ಎನ್ನುವ ಉದಾಸೀನ ಮನೋಭಾವದಿಂದ ಹಲವು ಅದ್ಭುತ ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ. ನಿಶ್ಚಿತ ಮತ್ತು ನಿಖರ ಗುರಿಯನ್ನು ಇಟ್ಟುಕೊಳ್ಳುವುದರ ಜತೆಗೆ, ಒಂದು ವ್ಯವಸ್ಥಿತವಾದ ವೇಳಾಪಟ್ಟಿಯನ್ನು ವಾಡಿಕೊಂಡು ನಿರಂತರ ಪರಿಶ್ರಮ ಹಾಕಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ನಾವು ಗುಣಮಟ್ಟದಲ್ಲಿ ರಾಜಿ ವಾಡಿಕೊಳ್ಳದೆ ಇತರರು ವಾಡುವುದಕ್ಕಿಂತ ಭಿನ್ನವಾಗಿ ಆಲೋಚಿಸಿ ಕೆಲಸ ವಾಡಿ ತೋರಿಸಿದರೆ ಬಹುಬೇಗ ವತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು. ಕಠಿಣ ಪರಿಶ್ರಮವಿಲ್ಲದೆ ಯಾವುದೇ ಪ್ರತಿಫಲವನ್ನು ನಿರೀಕ್ಷೆ ವಾಡಬಾರದು ಎಂದರು.
ಪ್ರತಿ ಸಾಧಕ ನಾನು ಇನ್ನೂ ಐದು ಅಥವಾ ಹತ್ತು ವರ್ಷಗಳಲ್ಲಿ ಏನಾಗಬೇಕು ಮತ್ತು ಎಲ್ಲಿರಬೇಕು ಎಂಬ ಗುರಿಯಿಟ್ಟುಕೊಂಡು ನಿರಂತರ ಶ್ರಮ ಹಾಕಬೇಕು. ಮುಂದಿನ ವಾರ್ಚ್ ನಂತರ ಕರ್ನಾಟಕದಲ್ಲಿ ಸುವಾರು ಐದು ಸಾವಿರ ಅಧ್ಯಾಪಕರ ಹುದ್ದೆಯನ್ನು ತುಂಬಲು ಸರ್ಕಾರ ತಯಾರಿ ನಡೆಸುತ್ತಿದ್ದು, ಇಂತಹ ಚಿನ್ನದ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದರು.
ಶಿಬಿರಾರ್ಥಿಗಳಿಗೆ ಶುಭಹಾರೈಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಆರ್.ಲೋಕನಾಥ್, 25 ವರ್ಷಗಳ ಹಿಂದೆ ಜ್ಞಾನಬುತ್ತಿ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿ ಬಂದು ತರಬೇತಿ ಪಡೆದಿದ್ದನ್ನು ನೆನಪು ವಾಡಿಕೊಂಡರು.
ಸಾಧಕನಿಗೆ ಗುರು ಮತ್ತು ಗುರಿ ಇರಬೇಕು. ಪರೀಕ್ಷೆಯಲ್ಲಿ ಉತ್ತರಿಸುವಾಗ ಎಲ್ಲರಿಗಿಂತ ಭಿನ್ನವಾಗಿ ಬರೆದರೆ ಮೌಲ್ಯವಾಪಕರ ಗಮನ ಸೆಳೆದು ಅತ್ಯುತ್ತಮ ಅಂಕಗಳನ್ನು ಗಳಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಸಹಕಾರ ಮಹಾಮಂಡಳದ ನಿರ್ದೇಶಕ ವೈ.ಎನ್. ಶಂಕರೇಗೌಡ ವಾತನಾಡಿ, ಅವಕಾಶಗಳು ಬಂದಾಗ ಬಾಚಿಕೊಳ್ಳುವ ಆಸೆಬುರುಕತನ ವಿದ್ಯಾರ್ಥಿಗಳಲ್ಲಿ ಇರಬೇಕು. ಬೇರೆಲ್ಲ ಹುದ್ದೆಗಳಿಗಿಂತ ಅಧ್ಯಾಪಕ ಹುದ್ದೆ ಜೀವನ ಸಂತಪ್ತಿಯಿಂದ ಕೂಡಿರುತ್ತದೆ. ಸವಾಜದಲ್ಲಿ ವೈದ್ಯ ಮತ್ತು ಅಧ್ಯಾಪಕರ ಹುದ್ದೆಗಳು ನತೆಗೌರವದಿಂದ ಕೂಡಿರುತ್ತದೆ ಎಂದರು.
ಶಿಕ್ಷಣ ತಜ್ಞರಾದ ಪ್ರೊ. ಎನ್.ಎನ್. ಪ್ರಹ್ಲಾದ್, ಪ್ರೊ. ಆರ್.ಎನ್. ಪದ್ಮನಾಭ, ಪ್ರೊ. ವಿ. ಜಯಪ್ರಕಾಶ್, ಪ್ರೊ. ಕೆ. ಯಶೋದರಾ, ಪ್ರೊ.ಎನ್.ಮಹದೇವಸ್ವಾಮಿ, ಪ್ರೊ. ಕ.ಪ.ಗಣೇಶ, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್. ಬಾಲಕಷ್ಣ ಇತರರು ಇದ್ದರು.