ಸ್ಪರ್ಧಾತ್ಮಕ ಎಕ್ಸಾಮ್‌ಗೆ ಉಚಿತ ತರಬೇತಿ

8blh2vip news
Published on

ಬೈಲಹೊಂಗಲ: ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಡಾ.ವಿ.ಐ.ಪಾಟೀಲ ಫೌಂಡೇಶನ್ ಹಾಗೂ ಧಾರವಾಡದ ಸಂಕಲ್ಪ ಅಕಾಡೆಮಿ ಸಹಯೋಗದಲ್ಲಿ ಜು. 20ರಂದು ಪಟ್ಟಣದ ಗಣಾಚಾರಿ ಮಹಾವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗಾಗಿ ಪ್ರವೇಶ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹತ್ತು ವರ್ಷಗಳಿಂದ ನಮ್ಮ ಫೌಂಡೇಶನ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಪಿಎಸ್‌ಐ, ಪಿಸಿ, ಬ್ಯಾಂಕ್ ಪರೀಕ್ಷೆ, ಎ್ಡಿಎ, ಎಸ್‌ಡಿಎ, ಪಿಡಿಒ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 4 ತಿಂಗಳು ಉಚಿತ ತರಬೇತಿ ನೀಡಲಾಗುತ್ತಿದೆ.

ಪರೀಕ್ಷೆಯಲ್ಲಿ ಪಾಸಾದ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಜು.28ರಂದು ಪ್ರಕಟಿಸಲಾಗುವುದು. ಈಗಾಗಲೇ ತರಬೇತಿ ಪಡೆದು ಸುಮಾರು 60ಕ್ಕಿಂತ ಹೆಚ್ಚು ಯುವಕರು ವಿವಿಧ ಇಲಾಖೆಗಳಲ್ಲಿ ಹುದ್ದೆ ಅಲಂಕರಿಸಿದ್ದಾರೆ ಎಂದರು. ಆಸಕ್ತರು ಜು.18ರೊಳಗೆ ತಮ್ಮ ಹೆಸರು ನೋಂದಣಿ ಮಾಡಬೇಕೆಂದು ತಿಳಿಸಿದರು. ಧಾರವಾಡದ ಸಂಕಲ್ಪ ಅಕಾಡೆಮಿ ವಿಠ್ಠಲ ಪಾಟೀಲ, ಮಹಾಂತೇಶ ಗುಂಡ್ಲೂರ, ಆನಂದ ಮೂಗಿ, ಅಶೋಕ ಗುಂಡ್ಲೂರ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net