ಅರಕಲಗೂಡು: ಪಟ್ಟಣದ ವಾರಿಯರ್ಸ್ ಅಕಾಡೆಮಿ ವತಿಯಿಂದ ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದಾಗಿ ಅಕಾಡೆಮಿ ಮುಖ್ಯಸ್ಥ ಹಾಗೂ ನಿವೃತ್ತ ಯೋಧ ಎಚ್.ಎಸ್.ಮಂಜುನಾಥ್ ತಿಳಿಸಿದರು.
ಗ್ರಾಮಾಂತರ ಪ್ರದೇಶದ ಯುವಜನರು ಸೌಲಭ್ಯಗಳ ಕೊರತೆಯಿಂದಾಗಿ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ವ್ಯವಸ್ಥಿತವಾಗಿ ಸಿದ್ಧತೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ತರಬೇತಿ ಹಮ್ಮಿಕೊಂಡಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಫ್‌ಡಿಎ, ಎಸ್‌ಡಿಎ, ಪಿಡಿಒ, ವಿಲೇಜ್ ಅಕೌಂಟೆಂಟ್, ಆರ್ಮಿ, ವೇವಲ್, ಏರ್‌ಫೋರ್ಸ್, ಪ್ಯಾರಾ ಮಿಲಿಟರಿ ಸೇರಿದಂತೆ ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ, ವಿಜ್ಞಾನ, ಗಣಿತ, ಪರಿಸರ ವಿಜ್ಞಾನ, ಇತಿಹಾಸ, ಕನ್ನಡ, ಇಂಗ್ಲಿಷ್ ವಿಷಯಗಳ ಶೈಕ್ಷಣಿಕ ತರಬೇತಿ ಹಾಗೂ ದೈಹಿಕ ತರಬೇತಿ ನೀಡಲಾಗುವುದು. ನುರಿತ ಉಪನ್ಯಾಸಕರು ಬೋಧನೆ ನಡೆಸಲಿದ್ದು, ಜುಲೈ 1ರಿಂದ ತರಗತಿಗಳು ಪ್ರಾರಂಭವಾಗಲಿವೆ. ಆಸಕ್ತರು ಮೊ: 9740199271/9419478054 ಸಂಪರ್ಕಿಸುವಂತೆ ಕೋರಿದರು. ಅಕಾಡೆಮಿ ಸದಸ್ಯರಾದ ಭವಾನಿ ಕುಮಾರ್, ಮಂಜುನಾಥ್, ಸಂದೀಪ್ ಶಿವಣ್ಣ ಇದ್ದರು.