ಎಂಐಟಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಉಚಿತ ತರಬೇತಿ

Published on

ಮೈಸೂರು: ನಂಜನಗೂಡು ರಸ್ತೆಯಲ್ಲಿರುವ ತಾಂಡವಪುರ ಎಂಐಟಿ ಕಾಲೇಜಿನಲ್ಲಿ ಮಾ.20ರಿಂದ ಎರಡು ವಾರಗಳ ಉಚಿತ ಸಿಇಟಿ ತರಬೇತಿ ಆಯೋಜಿಸಲಾಗಿದೆ ಎಂದು ಸಿಇಟಿ ಸಂಯೋಜಕ ಪ್ರೊ.ಎನ್. ಪ್ರದೀಪ್ ತಿಳಿಸಿದರು.

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಪ್ರತಿಭಾನ್ವಿತ ಅಭ್ಯರ್ಥಿಗಳ ತಾಂತ್ರಿಕ ಭವಿಷ್ಯಕ್ಕೆ ಅನುಕೂಲವಾಗಲೆಂದು ಸತತ ಎಂಟು ವರ್ಷಗಳಿಂದ ಕಾಲೇಜಿನಲ್ಲಿ ಉಚಿತ ಸಿಇಟಿ ತರಬೇತಿ ಆಯೋಜಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿಬಿರದಲ್ಲಿ ಊಟದ ವ್ಯವಸ್ಥೆ ಇದ್ದು, ಮೈಸೂರು, ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ, ಸರಗೂರು, ಎಚ್.ಡಿ. ಕೋಟೆ, ತಿ. ನರಸೀಪುರ, ಪಾಂಡವಪುರ, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಕೆ.ಆರ್. ನಗರ ಮತ್ತು ಹುಣಸೂರು ತಾಲೂಕುಗಳಿಂದ ಉಚಿತ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಇಟಿ ಮಾರ್ಗದರ್ಶಕ ಪ್ರೊ. ಮೊಹಮ್ಮದ್ ಸಲಾಮತ್ ಮಾತನಾಡಿ, ಈ ಅವಕಾಶ ಬಳಸಿಕೊಂಡು ಅರ್ಹ ಅಭ್ಯರ್ಥಿಗಳು ಸರ್ಕಾರಿ ಕೋಟಾದಡಿಯಲ್ಲಿ ಪ್ರವೇಶಾತಿ ಪಡೆದು ತಮ್ಮ ಇಂಜಿನಿಯರಿಂಗ್ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ. 8310854887, 9980832371 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net