ಮಕ್ಕಳಿಗೆ ಉಚಿತ ತಪಾಸಣೆ ಶಿಬಿರ

Free check-up camp for children
Published on

ವಿಜಯಪುರ : ಮಕ್ಕಳಲ್ಲಿ ಕಂಡು ಬರುವ ಚಂಚಲತೆ ಮತ್ತು ಅತಿ ಚಟುವಟಿಕೆ (ಎಡಿಎಚ್‌ಡಿ) ಕಾಯಿಲೆಗೆ ನಗರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಏ. 21 ರಿಂದ 26 ರವರೆಗೆ ಉಚಿತ ತಪಾಸಣೆ ಮತ್ತು ಉಚಿತ ಪಂಚಕರ್ಮ ಚಿಕಿತ್ಸೆ ಶಿಬಿರ ನಡೆಯಲಿದೆ.

ಆಸ್ಪತ್ರೆಯ ಕೌಮಾರ ಭೃತ್ಯ ವಿಭಾಗದಿಂದ ಆರು ದಿನ ಶಿಬಿರ ನಡೆಯಲಿದೆ. ಮಕ್ಕಳು ಒಂದೇ ಜಾಗದಲ್ಲಿ ಕುಳಿತು ಕೊಳ್ಳದಿರುವುದು, ಹೋಂ ವರ್ಕ್ ಅಥವಾ ಶಾಲೆ ಚಟುವಟಿಕೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲು ಹಿಂಜರಿಯುವುದು, ದೈನಂದಿನ ಚಟುವಟಿಕೆಯಲ್ಲಿ ಬಲು ಬೇಗನೆ ಬೇಸರಗೊಳ್ಳುವುದು, ಅಭ್ಯಾಸದಲ್ಲಿ ಏಕಾಗ್ರತೆ ಕೊರತೆ ಸೇರಿದಂತೆ ಮುಂತಾದ ಅಟೆನ್ಶನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಅಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಈ ಶಿಬಿರದಲ್ಲಿ ಉಚಿತ ತಪಾಸಣೆ ಹಾಗೂ ಉಚಿತ ಪಂಚಕರ್ಮ ಚಿಕಿತ್ಸೆ ನೀಡಲಾಗುವುದು.

ಪಾಲಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 8197378138ಕ್ಕೆ ಸಂಪರ್ಕಿಸುವಂತೆ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net