ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

rotry
Published on

ಮಡಿಕೇರಿ: ರೋಟರಿ ಮಡಿಕೇರಿ ವತಿಯಿಂದ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ರಸ್ತೆಯ ನಗರಸಭಾ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಮತ್ತು ಕಲಿಕಾ ಸಲಕರಣೆಗಳನ್ನು ಉಚಿತವಾಗಿ ನೀಡಲಾಯಿತು.

ಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಈ ಶಾಲೆಯಲ್ಲಿ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಇಬ್ಬರು ಶಿಕ್ಷಕರಿಗೆ ರೋಟರಿ ವತಿಯಿಂದ ಗೌರವಧನವನ್ನು ಕೂಡ ವಿತರಿಸಲಾಯಿತು.

ರೋ.ಡಾ.ಎಂ.ಜಿ.ಪಾಟ್ಕರ್ ಹಾಗೂ ರೋ.ಹೆಚ್.ಎಸ್.ಅನಂತ ಸುಬ್ಬರಾವ್ ಅವರು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ರೋಜಿ, ರೋಟರಿ ಅಧ್ಯಕ್ಷೆ ರೋ.ಲಲಿತಾ ರಾಘವನ್, ಕಾರ್ಯದರ್ಶಿ ರೋ.ಬಿ.ಎಂ.ಸೋಮಣ್ಣ, ರೋ.ಡಾ.ಎಂ.ಜಿ.ಪಾಟ್ಕರ್, ಡಾ.ಜಯಲಕ್ಷ್ಮಿ ಪಾಟ್ಕರ್, ರೋ.ಹೆಚ್.ಎಸ್.ಅನಂತ ಸುಬ್ಬರಾವ್, ರೋಟರಿ ಸದಸ್ಯರು ಹಾಗೂ ನಗರಸಭಾ ಸದಸ್ಯೆ ಸಬಿತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net