ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ

Free book distribution to schools
Published on

ಜಮಖಂಡಿ:ಶಾಲಾ ಮಕ್ಕಳಲ್ಲಿ ಪುಸ್ತಕಗಳ ಓದುವ ಹವ್ಯಾಸ ಹೆಚ್ಚಿಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.ನಗರದ ಬಾಲಕರ ಪಿಬಿ ಪ್ರೌಢಶಾಲೆಯ ಗುರುದೇವ ರಾನಡೆ ಸಾಂಸತಿಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇವುಡು ಹೇಳಿದ ಮಕ್ಕಳ ಕಥೆಗಳು ಐದು ಸಂಪುಟಗಳನ್ನು ತಾಲೂಕಿನ ಎಲ್ಲ ಶಾಲೆಗಳಿಗೆ ವಿತರಿಸಿ ಅವರು ಮಾತನಾಡಿದರು.

ಮಕ್ಕಳು ಮೊಬೈಲ್​ ಚಟ ಬೆಳೆಸಿಕೊಳ್ಳುತ್ತಿದ್ದಾರೆ. ಇದು ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ಪುಸ್ತಕಗಳ ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಪಾಲಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.ಸಾಹಿತಿ ಪ್ರೊ. ಮಲ್ಲೇಪುರಂ ವೆಂಕಟೇಶ ಅವರು ರಾಜ್ಯ, ದೇಶ ಕಂಡ ಅಪ್ರತಿಮ ಸಾಹಿತಿಯಾಗಿದ್ದಾರೆ. ಸಾಹಿತ್ಯ ಕೃಷಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸದೃಢ ಭಾರತ, ಆತ್ಮನಿರ್ಭರ ಭಾರತ ಭವಿಷ್ಯ ಭಾರತ ಮಕ್ಕಳ ಮೇಲಿದೆ. ತಾಲೂಕಿನ 300ಕ್ಕೂ ಅಧಿಕ ಶಾಲೆಗಳಿಗೆ ವೈಯಕ್ತಿಕವಾಗಿ ಪುಸ್ತಕಗಳನ್ನು ವಿತರಿಸಲಾಗುವುದು ಎಂದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಮಹಾಭಾರತ, ರಾಮಾಯಣ ಹಾಗೂ 12ನೇ ಶತಮಾನದಲ್ಲಿ ಶರಣರ ವಚನಗಳನ್ನು ಬರೆದಿಟ್ಟಿದ್ದರಿಂದ ಇಂದು ಎಲ್ಲರಿಗೂ ಓದಲು ಕೇಳಲು ಸಹಕಾರಿಯಾಗಿವೆ. ಭಾರತ ವಿಶ್ವ ಗುರುವಾಗುವಲ್ಲಿ ಸಾಧು ಸಂತರ ಕೊಡುಗೆ ಬಹಳಷ್ಟಿದೆ. ಶಾಸಕ ಜಗದೀಶ ಗುಡಗುಂಟಿ ಅವರು ಶಿಣ, ಸಾಹಿತ್ಯ, ಅಧ್ಯಾತ್ಮ, ಕ್ರೀಡೆ ಸೇರಿ ಹಲವಾರು ೇತ್ರಗಳಿಗೆ ಸಹಾಯ ಸಹಕಾರ ನೀಡುವ ಮೂಲಕ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಲಬುರಗಿ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿದರು. ದೇವುಡು ಹೇಳಿದ ಮಕ್ಕಳ ಕಥೆಗಳು ಪುಸ್ತಕಗಳನ್ನು ಬಿಡುಗಡೆಗೊಳಿಸಿ ತಾಲೂಕಿನ 300ಕ್ಕೂ ಅಧಿಕ ಶಾಲೆಗಳ ಶಿಕರಿಗೆ ವಿತರಿಸಲಾಯಿತು.ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ತಹಸೀಲ್ದಾರ್​ ಅನೀಲ ಬಡಿಗೇರ, ಉದ್ಯಮಿ ಧರ್ಮಲಿಂಗಯ್ಯ ಗುಡಗುಂಟಿ, ನಾಗಪ್ಪ ಸನದಿ, ಅಥಣಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿದ್ದಣ್ಣ ಉತ್ನಾಳ, ಎಸ್​ಡಿಎಂಸಿ ಅಧ್ಯ ಸವೋರ್ತ್ತಮ ಗಲಗಲಿ ಇತರರು ಇದ್ದರು. ಜಿಜಿ ಹೈಸ್ಕೂಲಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪ ಪ್ರಾಚಾರ್ಯ ಭೂಷಣ ಪತ್ತಾರ ಸ್ವಾಗತಿಸಿದರು. ಬಿಇಒ ಅಶೋಕ ಬಸಣ್ಣವರ ಪ್ರಾಸ್ತವಿಕವಾಗಿ ಮಾತನಾಡಿದರು. ಮಹಾಂತೇಶ ಹಾನಾಪುರ ನಿರೂಪಿಸಿದರು.

ಜಮಖಂಡಿ ನಗರದ ಗುರುದೇವ ರಾನಡೆ ಸಾಂಸತಿಕ ಭವನದಲ್ಲಿ ದೇವುಡು ಹೇಳಿದ ಮಕ್ಕಳ ಕಥೆಗಳು ಪುಸ್ತಕವನ್ನು ಶಾಸಕ ನಾಡೋಜ ಜಗದೀಶ ಗುಡಗುಂಟಿ ಬಿಡುಗಡೆಗೊಳಿಸಿದರು. ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net