ಉಚಿತ ಬೈಸಿಕಲ್ ಯೋಜನೆ ಆರಂಭವಾಗಲಿ

13
ರಾಯಬಾಗ ತಾಲೂಕಿನ ಮೇಖಳಿ ಆದರ್ಶ ವಿದ್ಯಾಲಯದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಾಸಕ ಡಿ.ಎಂ. ಐಹೊಳೆ ಸಮವಸ ವಿತರಿಸಿದರು. ಬಸವರಾಜಪ್ಪ, ಬಸವರಾಜ ಕಾಂಬಳೆ, ಎ.ಎನ್.ಉಸ್ತಾದ್ ಇತರರಿದ್ದರು.
Published on

ರಾಯಬಾಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ಯೋಜನೆಯನ್ನು ರಾಜ್ಯ ಸರ್ಕಾರ ಪುನಃ ಪ್ರಾರಂಭಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಮೇಖಳಿ ಆದರ್ಶ ವಿದ್ಯಾಲಯದ (ಆರ್‌ಎಂಎಸ್‌ಎ) ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶೇಂಗಾ ಚೆಕ್ಕಿ, ಮೊಟ್ಟೆ ಮತ್ತು ಸಮವಸ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಃಮುಟ್ಟುವ ರೀತಿಯಲ್ಲಿ ಪಾಠ ಬೋಧಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಬಸವರಾಜ ಕಾಂಬಳೆ, ಮುಖ್ಯ ಶಿಕ್ಷಕ ಎ.ಎನ್.ಉಸ್ತಾದ್, ಪಿಡಿಒ ನೂರಅಹ್ಮದ್ ಕುಡಚಿ, ಸಿಆರ್‌ಪಿ ರಾಜು ಕುರಾಡೆ, ರವೀಂದ್ರ ಪಟ್ಟೆಗಾರ, ಪಿ.ಎ.ನಾಯಿಕ, ಬಸವರಾಜ ನಾಯಿಕ, ಸಂಜು ಒಡೆಯರ, ಪಿ.ಎಸ್.ಶಾರಬಿದ್ರೆ, ಲಕ್ಷ್ಮಣ ಭಜಂತ್ರಿ, ವೀರಪ್ಪ ನಾಯಿಕ, ಕೃಷ್ಣಾ ನಾಯಿಕ, ಮಾರುತಿ ನಾಯಿಕ, ಕೃಷ್ಣಪ್ಪ ದತ್ತವಾಡೆ, ರವಿ ನಾಯಿಕ, ಅನಿಲ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net