

ಮೈಸೂರು: ಪ್ರಥಮ್ ಎಜುಕೇಷನ್ ಫೌಂಡೇಷನ್ ವತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣ ಯುವತಿಯರಿಗೆ ಎರಡು ತಿಂಗಳ ಉಚಿತ ಮೂಲ ನರ್ಸಿಂಗ್ ತರಬೇತಿ ಆಯೋಜಿಸಲಾಗಿದೆ ಎಂದು ಮುಖ್ಯಸ್ಥ ಜಯಪ್ರಸಾದ್ ಬೋಳನ ತಿಳಿಸಿದರು.
ತರಬೇತಿ ಬಳಿಕ ಉದ್ಯೋಗಾವಕಾಶಕ್ಕೂ ನೆರವು ನೀಡಲಾಗುತ್ತದೆ. ತರಬೇತಿ ಪಡೆದ ಗ್ರಾಮೀಣ ಪ್ರದೇಶದವರಿಗೆ ವೃದ್ಧಾಶ್ರಮ, ಹೋಂ ಕೇರ್‌ಗಳಲ್ಲಿ ಹಾಗೂ ನಗರ ಪ್ರದೇಶದವರಿಗೆ ಆಸ್ಪತ್ರೆಗಳಲ್ಲಿ ಉದ್ಯೋಗ ಕೊಡಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ದೂ.ಸಂ.080-23900332, 9738461062ನ್ನು ಸಂಪರ್ಕಿಸಲು ಕೋರಿದರು. ಸುದ್ದಿಗೋಷ್ಠಿಯಲ್ಲಿ ಫೌಂಷೇಷನ್‌ನ ರಶ್ಮಿಕಾ, ಸುಮಾ, ಸುಶ್ಮಿತ, ಪ್ರಿಯಾಂಕ ಇದ್ದರು.