ಬಳ್ಳಾರಿ : ಇಲ್ಲಿನ ಮೋಕಾ ರಸ್ತೆಯ ಚೈತನ್ಯ ಕಾಲೇಜು ಸಭಾಂಗಣದಲ್ಲಿ ಆಸರೆ ಟ್ರಸ್ಟ್ ವತಿಯಿಂದ ಬ್ಯಾಂಕ್ ಪರೀಕ್ಷೆಗಳನ್ನು ಯಶ್ವಸಿಯಾಗಿ ಎದುರಿಸುವ ಬಗ್ಗೆ ಸೆ. 10 ರಂದು (ಬುಧವಾರ) ಒಂದು ದಿನದ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಅಭ್ಯರ್ಥಿಗಳು ಸೆ. 10 ರೊಳಗೆ ನೋಂದಾಯಿಸಿಕೊಳ್ಳಬೇಕು. ಬೆಳಗ್ಗೆ 9.30ರೊಳಗಾಗಿ ಸಭಾಂಗಣದಲ್ಲಿ ಉಪಸ್ಥಿತರಿರಬೇಕು. ಜತೆಯಲ್ಲಿ ನೋಟ್‌ಬುಕ್, ಪೆನ್ ತರಬೇಕು. ಚಹಾ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಸೀಟುಗಳು ನಿಯಮಿತವಾಗಿವೆ. ಮೊ. 9481662205, 9535666829, 9900253154 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ರವಿ ಕೋಚಿಂಗ್ ಸೆಂಟರ್ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
====