ಉಚಿತ ಬ್ಯಾಡ್ಮಿಂಟನ್ ಶಿಬಿರ 28ರಿಂದ

23SND-02
ರಾಜನ್ ಮೋಹಿರೆ
Published on

ಸಿಂಧನೂರು: ನಗರದ ಎಫ್‌ಆರ್‌ಸಿಎಸ್ ಕ್ಲಬ್‌ನಲ್ಲಿ ಡಿ.28 ಮತ್ತು 29ರಂದು ಬೆಳಗಾವಿ ರಾಜನ್ಸ್ ಬ್ಯಾಡ್ಮಿಂಟನ್ ಅಕಾಡೆಮಿ ಹಾಗೂ ಎಫ್‌ಆರ್‌ಸಿಎಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಎರಡು ದಿನ ಉಚಿತವಾಗಿ ಬ್ಯಾಡ್ಮಿಂಟನ್ ಶಿಬಿರ ಆಯೋಜಿಸಲಾಗಿದೆ ಎಂದು ಸಿಇಒ ರಾಜನ್ ಮೋಹಿರೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಶಿಬಿರ ಪ್ರಾದೇಶಿಕ ಪ್ರಾಂತ್ಯದಲ್ಲಿ ಉದಯೋನ್ಮುಖ ಬ್ಯಾಡ್ಮಿಂಟನ್ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಲು ಅನುಕೂಲವಾಗಲಿದೆ. ಅನುಭವಿ ತರಬೇತಿದಾರರು ನಿರ್ವಹಿಸಲಿದ್ದಾರೆ. 5 ರಿಂದ 15 ವರ್ಷಗಳ ವಯಸ್ಸಿನ ಆಟಗಾರರಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಎರಡು ದಿನಗಳ ಕಾಲ ನಡೆಯಲಿದ್ದು, ಇದರ ಲಾಭ ಪಡೆಯಿರಿ ಎಂದರು.

ಎಫ್‌ಆರ್‌ಸಿಎಸ್ ಕ್ಲಬ್ ಅಧ್ಯಕ್ಷ ಸಿ.ಟಿ.ಪಾಟೀಲ್ ಮಾತನಾಡಿ, ಎಲ್ಲರ ಸಹಕಾರದಿಂದ ನಗರದಲ್ಲಿ ಅತ್ಯುತ್ತಮ ಟೆನ್ನಿಸ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅನೇಕ ಪಂದ್ಯಾವಳಿ ನಡೆಸಲಾಗಿದೆ.

ಬೆಳಗಾವಿ ರಾಜನ್ಸ್ ಬ್ಯಾಡ್ಮಿಂಟನ್ ಅಕಾಡೆಮಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಕೊಂಡೊಯ್ದಿದಿದೆ. ಈಗ ನಮ್ಮ ಜತೆ ಕೈಜೋಡಿಸಿರುವುದರಿಂದ ನಮ್ಮಲ್ಲಿನ ಪ್ರತಿಭೆಗಳಿಗೆ ಅನುಕೂಲವಾಗಲಿದೆ ಎಂದರು. ಕ್ಲಬ್ ಕಾರ್ಯದರ್ಶಿ ಬಸವರಾಜ ಸಿದ್ಧಾಂತಿಮಠ, ಬ್ಯಾಡ್ಮಿಂಟನ್ ಆಟಗಾರರಾದ ಲಿಂಗರಾಜ ಉದ್ಬಾಳ, ಡಾ.ವಿಶಾಲಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net