

ಹುಬ್ಬಳ್ಳಿ: ಉತ್ತರ ಕರ್ನಾಟಕ ಆಟೋ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಆಟೋ ರಿಕ್ಷಾ ಮಾಲಕರ ಚಾಲಕರ ಸಂಘದಿಂದ ಪ್ರತಿ ವರ್ಷದಂತೆ ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಹಾಗೂ ಚನ್ನಮ್ಮ ವೃತ್ತದಿಂದ ಮಹಾಶಿವರಾತ್ರಿ ಅಂಗವಾಗಿ ಸಿದ್ಧಾರೂಢ ಮಠಕ್ಕೆ ಉಚಿತ ಆಟೋ ಸೇವೆ ಹಾಗೂ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಶ್ರೀಕಾಂತ, ರಾಜೇಶ ಬಿಜ್ವಾಡ, ಮಾರುತಿ ಅಂಚಟಗೇರಿ, ಗೋಪಾಲ್ ಗಂಗಾಧರ, ಮಲ್ಲಿಕಾರ್ಜುನ ನಂದಿಹಾಳ, ದಾವಲಸಾಬ್ ಕೊರಹಟ್ಟಿ, ಮುರಳಿ ಇಂಗಳಹಳ್ಳಿ, ಮಹಾವೀರ ಮಿಲನ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.