

ಕಾರವಾರ: ಉತ್ತರ ಕನ್ನಡ ರೋಟರಿ ಕ್ಲಬ್ ಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 8 ರಂದು ಕಾರವಾರ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಕೃತಕ ಕೈಕಾಲು ಜೋಡಣೆ ಉಚಿತ ಶಿಬಿರ ಆಯೋಜಿಸಲಾಗಿದೆ ಎಂದು ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಡಾ.ಸಮೀರ ನಾಯಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುಣೆಯ ಸಾಧು ವಾಸ್ವಾನಿ ಟ್ರಸ್ಟ್, ರೋಟರಿ ಈಚಲಕರಂಜಿ ಟೆಕ್ಸ್ ಟೈಲ್ ಸಿಟಿ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ, ಯಲ್ಲಾಪುರದ ಹೆಬ್ಬಾರ ಡ್ರೀಂ ಫೌಂಡೆಷನ್, ಮರ್ಕ್ಯುರಿ ಶಿಪ್ ಪ್ರೈ.ಲಿ., ಶಿರಸಿ ಕೆಡಿಸಿ ಬ್ಯಾಂಕ್, ಕುಮಟಾದ ಸುಬ್ರಾಯ ವಾಳ್ಕೆ ಪ್ರಾಯೋಜಕತ್ವ ನೀಡಿವೆ ಎಂದರು.
ಇದನ್ನೂ ಓದಿ: ಹುಟ್ಟೂರಿನ ಗಣಪತಿ ನೋಡಿ ಖುಷಿಪಟ್ಟ ಮಹಾರಾಷ್ಟ್ರ ಎಂಪಿ
ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಷ್ಟು ಜನ ಬಂದರೂ ಅವರ ಕೈ, ಕಾಲುಗಳನ್ನು ಉಚಿತವಾಗಿ ಜೋಡಿಸಲಾಗುವುದು.
ಸೆ.8 ರ ಶಿಬಿರದಲ್ಲಿ ವಾಸ್ವಾನಿ ಟ್ರಸ್ಟ್ ನ ತಜ್ಞರು ಕೈ, ಕಾಲುಗಳ ಅಳತೆ ಪಡೆದು ಕೆಲ ದಿನಗಳ ನಂತರ ಇನ್ನೊಂದು ಶಿಬಿರದಲ್ಲಿ ಕೈ ಕಾಲನ್ನು ಜೋಡಿಕೊಡಲಿದ್ದಾರೆ ಎಂದರು.
ಕಾರವಾರ ಸೀಸೈಡ್ ರೋಟರಿ ಕ್ಲಬ್ ನ ಗಣಪತಿ ಬಾಡಕರ್ ಮಾತನಾಡಿ, ಅರಾಜಕೀಯ, ಜಾತ್ಯಾತೀತವಾಗಿರುವುದು ರೋಟರಿ ಕ್ಲಬ್ ಆಗಿದೆ. ಉತ್ತರ ಕನ್ನಡದ 11 ಕ್ಲಬ್ ಗಳು ಈ ಶಿಬಿರದಲ್ಲಿ ಕೈ ಜೋಡಿಸಿವೆ ಎಂದರು.
ರೋಟರಿ ಕ್ಲಬ್ ನ ಸಮುದಾಯ ಸಂಘಟಕ ಗುರುದತ್ತ ಬಂಟ್ ಮಾತನಾಡಿ, ಶಿಬಿರಕ್ಕೆ ಆಗಮಿಸುವವರು ಮುಂಚಿತವಾಗಿ, 9483535450, 9448729523 ಅಥವಾ 9916556627 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಕಾರವಾರ ರೋಟರಿ ಕ್ಲಬ್ ಪಶ್ಚಿಮ ಅಧ್ಯಕ್ಷ ಅರವಿಂದ ನಾಯಕ, ಮೊದಲು ನೋದಣಿ ಮಾಡಬೇಕು. ಹಿಂದಿನ ವೈದ್ಯಕೀಯ ದಾಖಲೆ ತರಬೇಕು ಎಂದು ತಿಳಿಸಿದರು.
ಡಾಲ್ರಿಚ್ ಫರ್ನಾಂಡಿಸ್,ಕಿರಣ ಮೋಹನ, ಗುರುರಾಜ ಭಟ್, ಅಮರನಾಥ ಶೆಟ್ಟಿ, ರಾಜೇಶ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.