ಅಂಗವಿಕಲರಿಗೆ ಉಚಿತ ಕೃತಕ ಕಾಲು ವಿತರಣೆ

ನಂಜನಗೂಡಿನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಶಿವಕುಮಾರ್ ಕಾಸನೂರು ವಿವಿಧ ಸಲಕರಣೆ ವಿತರಿಸಿದರು. ನಿರ್ಮಲ್ ಕುಮಾರ್, ರಿಯಾಜ್, ಶೋಭಾರಾಜ್ ಭಂಡಾರಿ, ರವಿ, ರಂಗಸ್ವಾಮಿ, ಶಿವಾಲಿ ಇದ್ದರು.
ನಂಜನಗೂಡಿನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಶಿವಕುಮಾರ್ ಕಾಸನೂರು ವಿವಿಧ ಸಲಕರಣೆ ವಿತರಿಸಿದರು. ನಿರ್ಮಲ್ ಕುಮಾರ್, ರಿಯಾಜ್, ಶೋಭಾರಾಜ್ ಭಂಡಾರಿ, ರವಿ, ರಂಗಸ್ವಾಮಿ, ಶಿವಾಲಿ ಇದ್ದರು.
Published on

ನಂಜನಗೂಡು: ಕಾಲು ಇಲ್ಲದವರಿಗೆ ಕೃತಕ ಕಾಲು ಜೋಡಣೆ ಉತ್ತಮ ಕಾರ್ಯ. ಒಳ್ಳೆಯ ಮನಸ್ಸಿನಿಂದ ಸೇವೆ ಸಲ್ಲಿಸಿದರೆ ದೇವರಿಗೆ ಸೇವೆ ಸಲ್ಲಿಸಿದಂತೆ ಎಂದು ತಹಸೀಲ್ದಾರ್ ಶಿವಕುಮಾರ್ ಕಾಸನೂರ್ ಹೇಳಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಯಚೂರಿನ ಆರ್.ಕೆ.ಭಂಡಾರಿ ಫೌಂಡೇಷನ್ ವತಿಯಿಂದ ಶನಿವಾರ ಅಂಗವಿಕಲರಿಗೆ ಉಚಿತ ಕೃತಕ ಕಾಲು ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೂರು ಕೋಟಿ ಅಂಗವಿಕಲರು ಭಾರತದಲ್ಲಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಆದರೆ ಆರ್‌ಕೆ ಭಂಡಾರಿ ಫೌಂಡೇಷನ್ ಮತ್ತು ಮೈಸೂರು ಮಿನರಲ್ಸ್ ಲಿ. ಸಹಾಯದಿಂದ ಇಂತಹ ಸೌಲಭ್ಯ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ತಾಲೂಕಿನ ಅಂಗವಿಕಲರಿಗೆ ಕೃತಕ ಕಾಲು, ವ್ಹೀಲ್ ಚೇರ್, ಊರು ಗೋಲು ಇತರ ಪರಿಕರಗಳನ್ನು ನೀಡುತ್ತಿರುವುದು ಉತ್ತಮ ಕಾರ್ಯ. ಮುಂದಿನ ದಿನಗಳಲ್ಲಿ ಎಲ್ಲ ಸೌಲಭ್ಯಗಳು ಇತರರಿಗೂ ಸಿಗಲಿ ಎಂದರು.

ಆರ್.ಕೆ ಫೌಂಡೇಷನ್ ಅಧ್ಯಕ್ಷ ಸೌಭಾಗ್ಯ ರಾಜ್ ಭಂಡಾರಿ ಮಾತನಾಡಿ, 10 ವರ್ಷಗಳಲ್ಲಿ 15 ಜಿಲ್ಲೆಗಳಲ್ಲಿ 21 ಸಾವಿರ ಜನರಿಗೆ ಕೃತಕ ಕಾಲು, ವ್ಹೀಲ್ ಚೇರ್ ಸೌಲಭ್ಯ ನೀಡಲಾಗಿದೆ. ಇಂದು 80 ಜನರಿಗೆ ಈ ಸೌಲಭ್ಯ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಮಿನರಲ್ ಲಿಮಿಟೆಡ್ ವ್ಯವಸ್ಥಾಪಕರಾದ ನಿರ್ಮಲ್ ಕುಮಾರ್, ರಿಯಾಜ್, ಶೋಭಾರಾಜ್ ಭಂಡಾರಿ, ರವಿ, ರಂಗಸ್ವಾಮಿ ಶಿವಾಲಿ ಇತರರು ಹಾಜರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net