ಉಚಿತ ಕೃತಕ ಕೈ, ಕಾಲು ಮಾಪನ ಶಿಬಿರ

new pm 1 new
Published on

ಹುಬ್ಬಳ್ಳಿ : ಅಪಘಾತ ಮತ್ತು ಇತರ ಕಾರಣಗಳಿಂದ ಕೈ, ಕಾಲು ಕಳೆದುಕೊಂಡವರಿಗೆ ಉಚಿತ ಕೃತಕ ಕೈ-ಕಾಲು ಮಾಪನ (ಅಳತೆ) ಶಿಬಿರವನ್ನು ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ ವತಿಯಿಂದ ಆ. 10ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಗೆ ಮೂರುಸಾವಿರ ಮಠದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಫೌಂಡೇಶನ್​ನ ಟ್ರಸ್ಟಿ ರಮೇಶ ಬಾಬು, ಕಳೆದ 17 ವರ್ಷದಿಂದ ಕೃತಕ ಕೈ, ಕಾಲು ಜೋಡಣೆ ಶಿಬಿರ ಆಯೋಜಿಸಲಾಗುತ್ತಿದೆ. ಆಂದ್ರಪ್ರದೇಶ, ಕೇರಳ, ತಮಿಳುನಾಡ, ಮಹರಾಷ್ಟ್ರ ಸೇರಿದಂತೆ ಕರ್ನಾಟಕದ 1,700 ಕ್ಕೂ ಹೆಚ್ಚು ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ನುರಿತ ತಜ್ಞರಿಂದ ಈ ಶಿಬಿರ ನಡೆಸಲಾಗುತ್ತಿದೆ. 200 ಜನರ ಕೃತಕ ಕೈ, ಕಾಲು ಅಳತೆಯನ್ನು ಪಡೆಯಲಾಗುತ್ತಿದೆ ಎಂದರು.

ಫೌಂಡೇಶನ್ ಸಿಇಒ ಸುನೀಲ ಕುಂಕೂನರ, ಡಾ. ಶಂಕರ ಕಾಮಟೆ, ಟ್ರಸ್ಟಿ ಅಮರೇಶ ಹಿಪ್ಪರಗಿ, ಅಮೃತಬಾಯಿ ಪಟೇಲ, ದಯಾಬಾಯಿ ಪಟೇಲ, ನವೀನ ಮಾಳಿನ ಸುದ್ದಿಗೋಷ್ಠಿಯಲ್ಲಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net