ಮಹಾಲಿಂಗೇಗೌಡರ ಆರೋಗ್ಯ ಸೇವೆ ಶ್ಲಾಘನೀಯ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ

Free ambulance service launched Mandya
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಮನುಷ್ಯನಲ್ಲಿ ಕೋಟ್ಯಂತರ ರೂ ಇದ್ದರೂ ಆರೋಗ್ಯವಿಲ್ಲದಿದ್ದರೆ ಯಾವುದಕ್ಕೂ ಉಪಯೋಗವಾಗುವುದಿಲ್ಲ. ಈ ನಿಟ್ಟಿನಲ್ಲಿ ಉಚಿತ ಆಂಬ್ಯುಲೆನ್ಸ್ ಒದಗಿಸುವ ಮೂಲಕ ಆರೋಗ್ಯ ಸೇವೆ ನೀಡುತ್ತಿರುವ ಮಹಾಲಿಂಗೇಗೌಡ ನಡೆ ಶ್ಲಾಘನೀಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಂ.ಎಂ ಫೌಂಡೇಶನ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಅವರ ಜನ್ಮದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸುವ ಹಾಗೂ ರೈತರಿಗೆ ಎರಡು ಸಾವಿರ ತೆಂಗಿನಸಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಿಗೆ ಯಾವುದೇ ಕಾಯಿಲೆ ಇಲ್ಲದಿದ್ದರೆ ಕೋಟಿ ದುಡ್ಡು ಇದ್ದಂತೆ. ಆರೋಗ್ಯವೇ ಮನುಷ್ಯನಿಗೆ ದೊಡ್ಡ ಭಾಗ್ಯ. ಆರೋಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಜನರಿಗೆ ಎಲ್ಲವೂ ಬೇಕು ಎನಿಸುತ್ತದೆ. ಆದರೆ, ಆರೋಗ್ಯ ಕಳೆದುಕೊಂಡರೆ ಯಾವುದೂ ಬೇಡ ಎನ್ನುತ್ತಾರೆ ಎಂದರು.

ದುಡಿದ ಹಣದಲ್ಲಿ ಸ್ವಲ್ಪ ಭಾಗ ಜನರ ಸೇವೆ ಮಾಡುತ್ತಿರುವ ಉದ್ಯಮಿ ಮಹಾಲಿಂಗೇಗೌಡ ಮತ್ತು ಅವರ ಸಹೋದರ ರಾಘವೇಂದ್ರ ಅವರು ಇನ್ನೂ ಎತ್ತರಕ್ಕೆ ಬೆಳೆದು ಮತ್ತಷ್ಟು ಸಮಾಜ ಸೇವೆ ಮಾಡಲಿ. ರೈತ ಕುಟುಂಬದಲ್ಲಿ ಸಹೋದರರು ಉದ್ಯಮಿಗಳಾಗಿ ಬೆಳವಣಿಗೆ ಸಾಧಿಸಿದ್ದಾರೆ. ಇವರಿಗೆ ಇನ್ನಷ್ಟು ಸೇವೆ ಮಾಡಲು ಭಗವಂತ ಬದುಕಿನಲ್ಲಿ ಶಕ್ತಿ ಕೊಡಲಿ. ಆದಿಚುಂಚನಗಿರಿ ಮಠದ ಭಕ್ತರಾಗಿರುವ ಮಹಾಲಿಂಗೇಗೌಡ ಯಾವುದೇ ಕಾರ್ಯಕ್ರಮವಾದರೂ ಶ್ರೀಗಳನ್ನು ಬಿಟ್ಟು ಮಾಡಿಲ್ಲ. ಸಮಾಜ ಸೇವಾ ತುಡಿತವಿರುವವರು, ಕೈ ತುಂಬಾ ಕೊಟ್ಟಷ್ಟು ಮತ್ತಷ್ಟು ಒದಗಿ ಬರಲಿ ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ಉದ್ಯಮಿ ಮಹಾಲಿಂಗೇಗೌಡ ಮುದ್ದನಘಟ್ಟ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಘವೇಂದ್ರ ಮುದ್ದನಘಟ್ಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net