ಮೈಸೂರು: ಆರಾಧ್ಯ ಮಹಾಸಭಾದ ವಿಶ್ವಭಾರತೀ ಸಂಸ್ಕೃತ ಪಾಠಶಾಲೆಗೆ 2025-26ನೇ ಸಾಲಿನ ಪ್ರವೇಶಾತಿ ಆರಂಭಗೊಂಡಿದೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಸಂಸ್ಕೃತ ನಿರ್ದೇಶನಾಲಯದಿಂದ ಮಣ್ಣನೆ ಪಡೆದಿರುವ ಪಾಠಶಾಲೆಯಲ್ಲಿ ಉಚಿತವಾಗಿ ಸಂಸ್ಕೃತ ಪ್ರಥಮ ಹಾಗೂ ಕಾವ್ಯ ತರಗತಿಗಳಿಗೆ ಬೋಧನೆ ಮಾಡಲಾಗುವುದು. ಆಸಕ್ತರು ಬೆಳಗ್ಗೆ 7ರಿಂದ 9 ಹಾಗೂ ಸಂಜೆ 5.30ರಿಂದ 7.30ರ ಅವಧಿಯಲ್ಲಿ ಶಾಲಾ ಮುಖ್ಯಸ್ಥರನ್ನು ಭೇಟಿಯಾಗುವುದು. ಮಾಹಿತಿಗೆ ಮೊಬೈಲ್ ಸಂಖ್ಯೆ 9980737941 ಅನ್ನು ಸಂಪರ್ಕಿಸುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.