ಪಶು ಚಿಕಿತ್ಸೆಗೆ ಉಚಿತ 1962 ಆಂಬುಲೆನ್ಸ್

vetran
ಎನ್.ಆರ್.ಪುರದ ಪಶು ಆಸ್ಪತ್ರೆ ತುರ್ತು ಚಿಕಿತ್ಸಾ ವಾಹನಕ್ಕೆ ಶಾಸಕ ಟಿ.ಡಿ.ರಾಜೇಗೌಡ ಹಸಿರು ನಿಶಾನೆ ತೋರಿಸಿದರು. ಪ್ರಶಾಂತ್ ಶೆಟ್ಟಿ, ಜುಬೇದಾ, ರಾಕೇಶ್, ಡಾ. ಸ್ವರಾಜ್ ಇತರರಿದ್ದರು.
Published on

ಎನ್.ಆರ್.ಪುರ: ಪಶು ಆಸ್ಪತ್ರೆಯಲ್ಲಿ ಉಚಿತವಾಗಿ ಪಶು ಸಂಜೀವಿನಿ 1962 ತುರ್ತು ಚಿಕಿತ್ಸಾ ವಾಹನ ಪ್ರಾರಂಭಿಸಲಾಗಿದ್ದು, ಹೈನುಗಾರರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಭಾನುವಾರ ಪಶು ಆಸ್ಪತ್ರೆಯಲ್ಲಿ ಪಶು ಸಂಜೀವಿನಿ 1962 ತುರ್ತು ಚಿಕಿತ್ಸಾ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿ, 108 ಮಾದರಿಯಲ್ಲಿ ಪಶುಗಳಿಗೆ ತುರ್ತು ಚಿಕಿತ್ಸೆ ಅಗತ್ಯವಾದಾಗ 1962ಕ್ಕೆ ಕರೆ ಮಾಡಿದರೆ ಮನೆ ಬಾಗಿಲಿಗೆ ತುರ್ತು ಚಿಕಿತ್ಸಾ ವಾಹನ ಬರಲಿದೆ. ಅದರಲ್ಲಿ ಒಬ್ಬ ಪಶು ವೈದ್ಯ, ಒಬ್ಬ ಅರೆ ತಾಂತ್ರಿಕ ಸಿಬ್ಬಂದಿ ಹಾಗೂ ಚಾಲಕ ಇರುತ್ತಾರೆ. ಉಚಿತವಾಗಿ ಚಿಕಿತ್ಸೆ ನೀಡವರು. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಸೇವೆ ಪಡೆಯಬಹುದು. ಪಶುಗಳಿಗೆ ತುರ್ತು ಸಂದರ್ಭ ಎದುರಾದಾಗ ಮಾತ್ರ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯೆ ಜುಬೇದಾ, ಪ್ರಭಾರ ಮುಖ್ಯಪಶು ವೈದ್ಯಾಧಿಕಾರಿ ರಾಕೇಶ್, 1962 ರ ತುರ್ತು ಚಿಕಿತ್ಸಾ ವಾಹನದ ವೈದ್ಯ ಡಾ. ಸ್ವರಾಜ್, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net